ಹಾಂಕಾಂಗ್: ಆ್ಯಪಲ್ ದೈನಿಕದ ಮುಖ್ಯ ಸಂಪಾದಕ ಸಹಿತ ನಾಲ್ವರು ಕಾರ್ಯ ನಿರ್ವಾಹಕರ ಬಂಧನ

Update: 2021-06-17 17:15 GMT
ಪೋಟೊ ಕೃಪೆ: //twitter.com/metesohtaoglu

ಹಾಂಕಾಂಗ್,ಜೂ.21: ಹಾಂಕಾಂಗ್ ನಲ್ಲಿ ನಡೆಯುತ್ತರುವ ಪ್ರಜಾಪ್ರಭುತ್ವ ಚಳವಳಿಯನ್ನು ಬಲವಾಗಿ ಬೆಂಬಲಿಸುತ್ತಿರುವ ಆ್ಯಪಲ್ ದಿನಪತ್ರಿಕೆಯ ಮುಖ್ಯಸಂಪಾದಕ ಹಾಗೂ ಇತರ ನಾಲ್ವರು ಹಿರಿಯ ಕಾರ್ಯನಿರ್ವ ಹಣಾಧಿಕಾರಿಗಳನ್ನು ಹಾಂಕಾಂಗ್ ಪೊಲೀಸರು ರಾಷ್ಟ್ರೀಯ ಭದ್ರತಾ ಕಾನೂನಿನಡಿ ಯಲ್ಲಿ ಗುರುವಾರ ಬೆಳಗ್ಗೆ ಬಂಧಿಸಿದ್ದಾರೆ.

 ಹಾಂಕಾಂಗ್ ನಲ್ಲಿ ನಡೆಯುತ್ತಿರುವ ಪ್ರಜಾಪ್ರಭುತ್ವ ಪರ ಚಳವಳಿಯ ಪರವಾದ ನಿಲುವನ್ನು ಹೊಂದಿದೆ. ಹಾಂಕಾಂಗ್‌ ಮೇಲೆ ಚೀನಾವು ತನ್ನ ನಿಯಂತ್ರಣವನ್ನು ಬಿಗಿಗೊಳಿಸುತ್ತಿರುವುದನ್ನು ಆ್ಯಪಲ್ ದೈನಿಕವು ನಿರಂತರವಾಗಿ ಖಂಡಿಸುತ್ತಲೇ ಬಂದಿದೆ.
     
ಹಾಂಕಾಂಗ್ ಪೊಲೀಸರು ಗುರುವಾರ ಆ್ಯಪಲ್ ದಿನಪತ್ರಿಕೆಯ ಕಾರ್ಯಾಲಯದ ಮೇಲೆ ದಾಳಿ ನಡೆಸಿ, ಮುಖ್ಯಸಂಪಾದಕ ಹಾಗೂ ಇತರ ನಾಲ್ವರು ಹಿರಿಯ ಕಾರ್ಯನಿರ್ವಾಹಕರನ್ನು ಬಂಧಿಸಿದರೆಂದು ಹಾಂಕಾಗ್ ನ ಭದ್ರತಾ ಕಾರ್ಯದರ್ಶಿ ಜಾನ್ ಲೀ ತಿಳಿಸಿದ್ದಾರೆ. ಕಾರ್ಯಾಲಯದಲ್ಲಿದ್ದ ಪತ್ರಿಕಾ ಉಪಕರಣಗಳನ್ನು ಕೂಡಾ ನೂತನ ರಾಷ್ಟ್ರೀಯ ಭದ್ರತಾ ಕಾನೂನಿನಡಿ ಪೊಲೀಸರು ಮುಟ್ಟುಗೋಲು ಹಾಕಿದ್ದಾರೆಂದು ಅವರು ಹೇಳಿದ್ದಾರೆ.
 
ಪೊಲೀಸ್ ಅಧಿಕಾರಿಗಳು ಪತ್ರಕರ್ತರ ಕಂಪ್ಯೂಟರ್ ಗಳನ್ನು ಕೂಡಾ ಪೊಲೀಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸರು ಸಂಪಾದಕೀಯ ಪ್ರಬಂಧಕರ ಕಚೇರಿಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದು, ಅವರ ಕಂಪ್ಯೂಟರ್ಗಳನ್ನು , ಹಲವಾರು ದಾಖಲೆಪತ್ರಗಳು ಮತ್ತು ಸುದ್ದಿಸಾಮಾಗ್ರಿಗಳನ್ನು ಕೊಂಡೊಯ್ದಿದ್ದಾರೆಂದು ಆ್ಯಪಲ್ ದೈನಿಕದ ಮುಖ್ಯ ಕಾರ್ಯನಿರ್ವಾಹಕ ಸಂಪಾದಕ ಲಾಮ್ ಮಾನ್ ಚುಂಗ್ ತಿಳಿಸಿದ್ದಾರೆ.
  
ನೆಕ್ಸ್ಟ್ ಡಿಜಿಟಲ್ ಲಿಮಿಟೆಡ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಆ್ಯಪಲ್ ಡೈಲಿ ಪ್ರಕಾಶಕ ಚೆಯುಂಗ್ ಕಿಮ್ ಹುಂಗ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಯ್ಸ್ಟನ್ ಚೋವ್ ಹಾಗೂ ಮುಖ್ಯಸಂಪಾದಕ ರಿಯಾನ್ ಹಾಗೂ ಉಪಸಂಪಾದಕರಾದ ಚಾನ್ ಪುಯಿ ಮ್ಯಾನ್ ಹಾಗೂ ಚೆಯುಂಗ್ ಚಿ ವಾಯಿ ಬಂಧಿತರಲ್ಲಿ ಸೇರಿದ್ದಾರೆಂದು ಅವರು ಹೇಳಿದ್ದಾರೆ.
  
ನೆಕ್ಸ್ಟ್ ಡಿಜಿಟಲ್ ಕಂಪೆನಿಯನ್ನು ಹಾಂಕಾಂಗ್ನ ಮಾಧ್ಯಮ ದೊರೆ ಜಿಮ್ಮಿ ಲಾಯ್ ಸ್ಥಾಪಿಸಿದ್ದು, ಅವರ ವಿರುದ್ಧ ಈಗಾಗಲೇ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗಿದೆ. ವಿದೇಶಿ ಶಕ್ತಿಗಳ ಜೊತೆ ಶಾಮೀಲಾದ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News