ಕೋವಿಡ್‌ ಸಾಂಕ್ರಾಮಿಕದಿಂದ ಭಾರತ ದೇಶ ʼವಿನಾಶವಾಗಿದೆʼ: ಡೊನಾಲ್ಡ್‌ ಟ್ರಂಪ್‌ ಹೇಳಿಕೆ

Update: 2021-06-17 18:33 GMT

ವಾಶಿಂಗ್ಟನ್:‌ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶನಿವಾರ ಸಂದರ್ಶನವೊಂದರಲ್ಲಿ ಮಾತನಾಡುತ್ತಾ "ಕೋವಿಡ್‌ ಸಾಂಕ್ರಾಮಿಕದಿಂದಾಗಿ ಭಾರತ ವಿನಾಶಗೊಂಡಿದೆ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೇ, ಕೊರೋನ ವೈರಸ್‌ ನ್ನು ಹರಡಿದ್ದಕ್ಕಾಗಿ ಚೀನಾ ದೇಶವು ಯುಎಸ್‌ ಗೆ 10 ಟ್ರಿಲಿಯನ್‌ ಡಾಲರ್‌ ನೀಡಬೇಕು ಎಂದು ಅವರು ಹೇಳಿದ್ದಾರೆ.

"ಚೀನಾ ಮಾಡಿದ ಕೆಲಸದಿಂದಾಗಿ ಹಲವಾರು ದೇಶಗಳು ನಾಶವಾಗುತ್ತಿವೆ. ಅದು ಅಕಸ್ಮಾತ್‌ ಆಗಿ ನಡೆದದ್ದೋ ಎಂದು ನನಗೆ ತಿಳಿದಿಲ್ಲ. ನಮ್ಮ ದೇಶಕ್ಕೂ ಕೋವಿಡ್‌ ತುಂಬಾ ಹಾನಿಯೆಸಗಿದೆ. ಆದರೆ ಇತರ ದೇಶಗಳಿಗೆ ತುಂಬಾ ಹಾನಿಯೆಸಗಿದೆ ಎಂದು ಭಾರತವನ್ನುದ್ದೇಶಿಸಿ ಹೇಳಿದರು. ಮುಂದುವರಿದು ಮಾತನಾಡಿದ ಅವರು, "ಭಾರತದಲ್ಲೇನಾಗುತ್ತಿದೆ ನೋಡಿ. ಅವರು ಈ ಹಿಂದೆ, ನಮ್ಮ ದೇಶವನ್ನು ನೋಡಿ, ನಮ್ಮ ದೇಶದಲ್ಲೇನಾಗುತ್ತಿದೆ ನೋಡಿ ಎಂದು ಹೇಳುತ್ತಿದ್ದರು."

"ಈಗ ನೋಡಿ ಭಾರತ ಎಷ್ಟು ಚೆನ್ನಾಗಿ ಕೋವಿಡ್‌ ನಿಭಾಯಿಸುತ್ತಿದೆ ಎಂದು. ಅವರು ಯಾವತ್ತಿಗೂ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಈಗ ಭಾರತ ಕೋವಿಡ್‌ ಸಾಂಕ್ರಾಮಿಕದಿಂದಾಗಿ ಸಂಪೂರ್ಣ ವಿನಾಶವಾಗಿದೆ. ಅದರ ಜೊತೆಗೆ ಇತರ ದೇಶಗಳೂ ನಾಶದಂಚಿಗೆ ಸಾಗುತ್ತಿದೆ" ಎಂದು ಹೇಳಿಕೆ ನೀಡಿದ್ದಾಗಿ ndtv.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News