ಕೆನಡಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಭಾರತೀಯ ಮೂಲದ ಮಹ್ಮೂದ್ ಜಮಾಲ್ ನೇಮಕ

Update: 2021-06-18 10:26 GMT
Photo: Twitter

ಒಂಟಾರಿಯೋ: ಭಾರತೀಯ ಮೂಲದ ಮಹ್ಮೂದ್ ಜಮಾಲ್ ಅವರನ್ನು ಕೆನಡಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕ ಮಾಡಲಾಗಿದೆ. ಈ ಕರಿತು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡಿಯೊ ಜೂನ್ 17, ಗುರುವಾರ ಮಾಹಿತಿ ನೀಡಿದ್ದಾರೆ.

ಜಮಾಲ್ ಅವರು ನೈರೋಬಿಯಲ್ಲಿ 1967ರಲ್ಲಿ ಭಾರತೀಯ ಕುಟುಂಬವೊಂದರಲ್ಲಿ ಜನಿಸಿದ್ದರು. ಮುಂದೆ ಬ್ರಿಟನ್‍ನಲ್ಲಿ ಬೆಳೆದ ಅವರು ನಂತರ 1981ರಲ್ಲಿ ತಮ್ಮ ಕುಟುಂಬದೊಂದಿಗೆ ಕೆನಡಾಗೆ ಬಂದು ನೆಲೆಸಿದ್ದರು.

2019ರಿಂದ ಅವರು ಒಂಟಾರಿಯೋ ನ್ಯಾಯಾಲಯದಲ್ಲಿ ಅಪೀಲ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದೆರಡು ದಶಕಗಳಿಂದ ವಕೀಲರಾಗಿರುವ ಜಮಾಲ್ ಅವರು ಕೆನಡಾದ ಎರಡು ಪ್ರತಿಷ್ಠಿತ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.

ಅವರ ಪತ್ನಿ ಕೂಡ ಇರಾನ್‍ನಿಂದ ಕೆನಡಾಗೆ ವಲಸೆ ಬಂದವರಾಗಿದ್ದಾರೆ.

"ಜೀವನದಲ್ಲಿ ನಾನು ನನ್ನ ಹೆಸರು, ಧರ್ಮ ಮತ್ತು ಚರ್ಮದ ಬಣ್ಣದಿಂದಾಗಿ ಹಲವು ಬಾರಿ ಕಿರುಕುಳಗೊಳಗಾಗಿದ್ದೆ" ಎಂದು ಈ ಹಿಂದೊಮ್ಮೆ ಜಮಾಲ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News