ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್‌ ವಿರುದ್ಧ ಎರಡನೇ ಲಂಚ ಪ್ರಕರಣ ದಾಖಲು

Update: 2021-06-18 11:56 GMT

ತಿರುವನಂತಪುರಂ: ಎಪ್ರಿಲ್‌ ನಲ್ಲಿ ನಡೆದ ವಿಧಾನಸಭಾ ಚುನಾವಣಾ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ಸ್ಫರ್ಧಿಸಲು ಕೇರಳದ ಆದಿವಾಸಿ ನಾಯಕಿಗೆ ಲಂಚ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಸುರೇಂದ್ರನ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತಾದಂತೆ 10 ದಿನಗಳ ಒಳಗೆ ದಾಖಲಾದ ಎರಡನೇ ಪ್ರಕರಣವಾಗಿದೆ ಇದು. 

ತಿಂಗಳ ಆರಂಭದಲ್ಲಿ ಜೆಆರ್‌ ಎಸ್‌ ರಾಜ್ಯ ಖಜಾಂಚಿ ಪ್ರಸೀತಾ ಅಝಿಕ್ಕೋಡ್‌, "ಚುನಾವಣೆಗೆ ಮುನ್ನ ಎನ್ಡಿಎಗೆ ಮರಳಲು ಆದಿವಾಸಿ ನಾಯಕಿ ಸಿ.ಕೆ ಜಾನು ಸುರೇಂದ್ರನ್‌ ರಿಂದ 10 ಕೋಟಿ ರೂ.ಗಳ ಬೇಡಿಕೆಯಿಟ್ಟಿದ್ದರು. ಕೊನೆಗೆ 10 ಲಕ್ಷ ರೂ.ಗಳನ್ನು ನೀಡಲಾಗಿತ್ತು ಎಂದು ಆರೋಪಿಸಿದ್ದರು. ಬಳಿಕ ಜಾನು ವಯನಾಡ್‌ ನ ಸುಲ್ತಾನ್‌ ಬತ್ತೇರಿಯಿಂದ ಸ್ಫರ್ಧಿಸಿದ್ದು, ಅಲ್ಲಿ ಅವರು ಸೋಲು ಕಂಡಿದ್ದರು.

ಈ ಒಪ್ಪಂದವನ್ನು ಉಲ್ಲೇಖಿಸುವ ಸುರೇಂದ್ರನ್‌ ಮತ್ತು ಸಿಕೆ ಜಾನುರದ್ದೆನ್ನಲಾದ ಆಡಿಯೋ ಕ್ಲಿಪ್‌ ಅನ್ನೂ ಬಿಡುಗಡೆ ಮಾಡಲಾಗಿತ್ತು. ಈ ಆರೋಪವನ್ನು ಸುರೇಂದ್ರನ್‌ ಮತ್ತು ಜಾನು ನಿರಾಕರಿಸಿದ್ದರು. ಈ ವೇಳೆ ಮತ್ತಷ್ಟು ಆಡಿಯೋ ಕ್ಲಿಪ್‌ ಗಳನ್ನು ಬಿಡುಗಡೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News