ಜೂ.19-20: ತಹ್ಸೀನ್ ಮುತಅಲ್ಲಿಂ ಸಂಗಮ

Update: 2021-06-18 12:03 GMT

ಸುರತ್ಕಲ್, ಜೂ 18: ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ವತಿಯಿಂದ ದಅವಾ ವಿದ್ಯಾರ್ಥಿಗಳಿಗಾಗಿ ತಹ್ಸೀನ್ ಮುತಅಲ್ಲಿಂ ಸಂಗಮವು ಜೂ.19 ಮತ್ತು 20ರಂದು ಗೂಗುಲ್ ಮೀಟ್ ಮೂಲಕ ಡಿವಿಷನ್ ಅಧ್ಯಕ್ಷ ಹನೀಫ್ ಅಹ್ಸನಿ ಕಾಮಿಲ್ ಸಖಾಫಿ ಶೇಡಿಗುರಿಯ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಎಸ್ಸೆಸ್ಸೆಫ್ ದ.ಕ. ಜಿಲ್ಲಾ ವೆಸ್ಟ್ ದಅವಾ ಕಾರ್ಯದರ್ಶಿ ಆರೀಫ್ ಝುಹುರಿ ಮುಕ್ಕ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅತಿಥಿಯಾಗಿ ಎಸ್ಸೆಸ್ಸೆಫ್ ದ.ಕ. ಜಿಲ್ಲಾ ವೆಸ್ಟ್ ದಅವಾ ಕನ್ವೀನರ್ ಉಮರುಲ್ ಫಾರೂಕ್ ಸಖಾಫಿ ಕಾಟಿಪಳ್ಳ ಭಾಗವಹಿಸಲಿದ್ದಾರೆ.

ಸಂಪನ್ಮೂಲ ವ್ಯಕ್ತಿಗಳಾಗಿ ಮರ್ಕಝ್ ಮುದರ್ರಿಸ್ ಮುಹಮ್ಮದ್ ಸಖಾಫಿ ಪರವೂರ್ ಮಲಪ್ಪುರಂ, ಎಸ್ಸೆಸ್ಸೆಫ್ ದ.ಕ. ಜಿಲ್ಲಾ ವೆಸ್ಟ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ, ಭಾಗವಹಿಸಲಿದ್ದಾರೆ ಎಂದು ಡಿವಿಷನ್ ದಅವಾ ಕಾರ್ಯದರ್ಶಿ ಮುಹಮ್ಮದ್ ಸಿನಾನ್ ಸಖಾಫಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News