ಐಎಂಎ ಉಡುಪಿ, ಕರಾವಳಿ ವೈದ್ಯರಿಂದ ಕಪ್ಪುಪಟ್ಟಿ ಪ್ರತಿಭಟನೆ
Update: 2021-06-18 19:55 IST
ಉಡುಪಿ, ಜೂ.18: ಭಾರತೀಯ ವೈದ್ಯಕೀಯ ಸಂಘ (ಐಎಂಎ) ಉಡುಪಿ -ಕರಾವಳಿ ಶಾಖೆಯ ವತಿಯಿಂದ ಶುಕ್ರವಾರ ದೇಶದಲ್ಲಿ ವೈದ್ಯರ ಮೇಲಿನ ಹಲ್ಲೆಯನ್ನು ವಿರೋಧಿಸಿ ಹಾಗೂ ವೈದ್ಯರ ರಕ್ಷಣೆಗೆ ಆಗ್ರಹಿಸಿ ಕಪ್ಪುಪಟ್ಟಿ ಪ್ರದರ್ಶನ ಹಾಗೂ ಕಪ್ಪು ಮಾಸ್ತ್ ಧರಿಸಿ ಅಜ್ಜರಕಾಡಿನಲ್ಲಿರುವ ಐಎಂಎ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.
ಐಎಂಎ ಉಡುಪಿ-ಕರಾವಳಿ ಶಾಖೆಯ ಅಧ್ಯಕ್ಷ ಡಾ.ಉಮೇಶ್ ಪ್ರಭು ಇವರ ಉಪಸ್ಥಿತಿಯಲ್ಲಿ ಕಾರ್ಯದರ್ಶಿ ಡಾ. ಪ್ರಕಾಶ್ ಭಟ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮೂಲಕ ಸಲ್ಲಿಸಿದ ಮನವಿಯನ್ನು ವಾಚಿಸಿದರು
ಭಾರತೀಯ ವೈದ್ಯಕೀಯ ಸಂಘದ ಉಡುಪಿ-ಕರಾವಳಿಯ ಸದಸ್ಯರು ಪ್ರತಿಭಟನೆ ವೇಳೆ ಹಾಜರಿದ್ದರು.