ಜೂ.23ಕ್ಕೆ ತ್ರೈಮಾಸಿಕ ಅಂಚೆ ಅದಾಲತ್
Update: 2021-06-18 20:07 IST
ಉಡುಪಿ, ಜೂ.18: ಉಡುಪಿಯ ಅಂಚೆ ಅಧೀಕ್ಷಕರ ಕಛೇರಿಯಲ್ಲಿ ಜೂನ್ 23ರಂದು ಬೆಳಗ್ಗೆ 10 ಗಂಟೆಗೆ ತ್ರೈಮಾಸಿಕ ಅಂಚೆ ಅದಾಲತ್ ನಡೆಯಲಿದೆ. ಅಂಚೆ ಗ್ರಾಹಕರು ತಮ್ಮ ದೂರು ಮತ್ತು ಸಲಹೆಗಳನ್ನು ಜೂನ್21ಕ್ಕೆ ಮೊದಲು ಅಧೀಕ್ಷಕರ ಕಚೇರಿಗೆ ಕಳುಹಿಸಿ ಕೊಡಬೇಕು. ಅಲ್ಲದೇ ಅಂಚೆ ಅದಾಲತ್ ನಡೆಯುವ ದಿನದಂದು ಹಾಜರಿದ್ದು ಸಮಕ್ಷಮ ಚರ್ಚಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಉಡುಪಿ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.