ಮಧ್ಯಪ್ರದೇಶ: ವಾಹನ ಡಿಕ್ಕಿ ಹೊಡೆದು ಹುಲಿ ಸಾವು

Update: 2021-06-18 15:06 GMT

ಉಮರಿಯಾ,ಜೂ.18: ಮಧ್ಯಪ್ರದೇಶದ ಉಮರಿಯಾ ಅರಣ್ಯ ವಿಭಾಗದ ಗುನಘುಟ್ಟಿ ವಲಯದಲ್ಲಿ ಶುಕ್ರವಾರ ಬೆಳಗಿನ ಜಾವ ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದ ಹುಲಿಯೊಂದು ವಾಹನ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದೆ. ‌

ಉಮರಿಯಾ ಜಿಲ್ಲಾ ಕೇಂದ್ರದಿಂದ ಸುಮಾರು 35 ಕಿ.ಮೀ.ದೂರ ರಾಷ್ಟ್ರೀಯ ಹೆದ್ದಾರಿ 43ರಲ್ಲಿ ಈ ಘಟನೆ ಸಂಭವಿಸಿದೆ. ನಸುಕಿನ ಮೂರು ಗಂಟೆಯ ಸುಮಾರಿಗೆ ಯಾವುದೋ ಲಘು ವಾಹನ ಹುಲಿಗೆ ಡಿಕ್ಕಿ ಹೊಡೆದಿರುವಂತಿದೆ, ಹುಲಿಯ ಶರೀರದಲ್ಲಿ ಗಾಯಗಳಾಗಿಲ್ಲ ಎಂದು ತಿಳಿಸಿದ ಉಮರಿಯಾ ವಿಭಾಗೀಯ ಅರಣ್ಯಾಧಿಕಾರಿ ಮೋಹಿತ ಸೂದ್ ಅವರು, ಹುಲಿಯ ಕಳೇಬರವನ್ನು ವಿಧಿವಿಜ್ಞಾನ ಪರೀಕ್ಷೆಗೊಳಪಡಿಸಲಾಗಿದೆ. ಈ ಹುಲಿಯು ಸಮೀಪದ ಬಾಂಧವಗಡ ಹುಲಿ ಮೀಸಲು ಅರಣ್ಯಕ್ಕೆ ಸೇರಿದ್ದಲ್ಲ ಎಂದರು.

ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಈ ಪ್ರದೇಶದಿಂದ ಸಾಗುವಾಗ ಎಚ್ಚರಿಕೆಯಿಂದಿರುವಂತೆ ಹೆದ್ದಾರಿ ವಾಹನ ಚಾಲಕರಿಗೆ ಸೂಚನೆೆ ನೀಡಲು ಫಲಕಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News