ಇಸ್ರೇಲ್ ವಾಯುದಾಳಿ: ಗಾಝಾ ಮತ್ತೆ ಉದ್ವಿಗ್ನ

Update: 2021-06-18 15:42 GMT
photo : twitter/@AJEnglish

ಗಾಝಾ,ಜು.19: ಗಾಝಾಪಟ್ಟಿ ಪ್ರದೇಶದ ಮೇಲೆ ಇಸ್ರೇಲ್ ಗುರುವಾರ ರಾತ್ರಿ ವಾಯುದಾಳಿ ನಡೆಸಿದೆ. ಕಳೆದ ತಿಂಗಳು ಇಸ್ರೇಲಿ ಯೋಧರು ಹಾಗೂ ಫೆಲೆಸ್ತೀನಿ ಹೋರಾಟಗಾರರ ನಡುವೆ 11 ದಿನಗಳ ಭೀಕರ ಸಂಘರ್ಷ ಕೊನೆಗೊಂಡ ಆನಂತರ ಇಸ್ರೇಲ್ ನಡೆಸಿದ ಎರಡನೆ ದಾಳಿ ಇದಾಗಿದೆ. ಹಮಾಸ್ ಹೋರಾಟಗಾರರು ದಹನಕಾರಿ ಬಲೂನ್ ಗಳನ್ನು ಇಸ್ರೇಲ್ ನೆಡೆಗೆ ಉಡಾವಣೆಗೊಳಿಸಿದ್ದಕ್ಕೆ ಪ್ರತೀಕಾರವಾಗಿ ಇಸ್ರೇಲ್ ವಾಯುದಾಳಿ ನಡೆಸಿದೆ. ಕಳೆದ ಮೂರು ದಿನಗಳಲ್ಲಿ ಇಸ್ರೇಲ್ ನಡೆಸಿದ ಎರಡನೆ ವಾಯುದಾಳಿ ಇದಾಗಿದೆ.

‌ಗಾಝಾದಿಂದ ಇಸ್ರೇಲ್ಗೆ ಸ್ಫೋಟಕ ಬಲೂನ್ಗಳನ್ನು ಉಡಾವಣೆಗಳಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ನಾವು ಗಾಝಾದಲ್ಲಿ ಹಮಾಸ್ ನೆಲೆಗಳ ಮೇಲೆ ರಾಕೆಟ್ ಉಡಾವಣೆಗೊಳಿಸಿದ್ದೇವೆ ಎಂದು ಇಸ್ರೇಲ್ ಸೇನೆ ಶುಕ್ರವಾರ ಟ್ವೀಟ್ ಮಾಡಿದೆ.


ತಾನು ಹಮಾಸ್ ನೆಲೆಗಳ ಮೇಲೆ ಮಾತ್ರ ದಾಳಿ ನಡೆಸಿರುವುದಾಗಿ ಇಸ್ರೇಲ್ ಹೇಳಿಕೊಂಡಿವೆಯಾದರೂ, ಗಾಝಾಪಟ್ಟಿಯಲ್ಲಿರುವ ಜಬಾಲಿಯಾ ಪಟ್ಟಣದಲ್ಲಿ ನಾಗರಿಕ ಆಡಳಿತ ಕಚೇರಿಯ ಕಟ್ಟಡ ಹಾಗೂ ಖಾನ್ಯೂನಿಸ್ ಪಟ್ಟಣ ಸಮೀಪದ ಹೊಲದ ಮೇಲೂ ಇಸ್ರೇಲ್ ದಾಳಿ ನಡೆಸಿದೆಯೆಂದು ಅಲ್ ಜಝೀರಾ ಸುದ್ದಿಸಂಸ್ಥೆ ವರದಿ ಮಾಡಿದೆ. ಆದಾಗ್ಯೂ ಗುರುವಾರದ ದಾಳಿಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲವೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News