ತಗ್ಗರ್ಸೆ: ಗಾಳಿ ಮಳೆಗೆ ಮರ ಬಿದ್ದು ಹಲವು ಮನೆಗಳಿಗೆ ಅಪಾರ ಹಾನಿ

Update: 2021-06-18 16:06 GMT

ಉಡುಪಿ, ಜೂ.18: ಜಿಲ್ಲೆಯಾದ್ಯಂತ ಶುಕ್ರವಾರ ಮಳೆಯಾಗಿದ್ದು ವಿವಿಧೆಡೆ ಮನೆ ಹಾಗೂ ವಿದ್ಯುತ್ ಕಂಬಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಗಾಳಿಮಳೆಯಿಂದ ಮನೆಯ ಮೇಲೆ ಮರ ಬಿದ್ದು ತಗ್ಗರ್ಸೆ ಗ್ರಾಮದ ಪಿ.ಡಿ. ತಂಗಚ್ಚನ್ ಎಂಬವರಿಗೆ 100,000ರೂ. ಮತ್ತು ಸುಶೀಲ ಶೆಟ್ಟಿ ಎಂಬವರಿಗೆ 200,000ರೂ. ನಷ್ಟ ಉಂಟಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ರಕ್ಷಣಾ ಕಾರ್ಯ ನಡೆಸಿದರು.

ಸ್ಥಳಕ್ಕೆ ಬೈಂದೂರು ತಹಶಿಲ್ದಾರ್ ಶೋಭಾಲಕ್ಷ್ಮಿ ಭೇಟಿ ನೀಡಿ ಕುಟುಂಬಕ್ಕೆ ಪರಿಹಾರದ ಭರವಸೆ ನೀಡಿದ್ದಾರೆ.ಅದೇ ರೀತಿ ಮರ ಬಿದ್ದು ಹಲವು ಮನೆಗಳಿಗೆ ಹಾನಿಯಾಗಿದ್ದು, ಉಡುಪಿ ತಾಲೂಕಿನ ಉದ್ಯಾವರದ ವಿಠಲ ಬಂಗೇರ ಎಂಬವರಿಗೆ 25,000ರೂ., ಬ್ರಹ್ಮಾ ವರ ತಾಲೂಕಿನ ನೀಲಾವರ ಗ್ರಾಮದ ಸೀತು ದೇವಾಡಿಗರಿಗೆ 30,000ರೂ., ನಾಲ್ಕೂರು ಗ್ರಾಮದ ಜಯಲಕ್ಷ್ಮೀ ಮಡಿವಾಳ್ತಿ ಎಂಬವರಿಗೆ 60,000ರೂ., 52 ಹೇರೂರು ಗ್ರಾಮದ ಸೂರಪ್ಪ ಮರಕಾಲ ಎಂಬವರಿಗೆ 40,000ರೂ., ಹಾರಾಡಿ ಗ್ರಾಮದ ರಜಿಯಾಜಿ ಎಂಬವರಿಗೆ 20,000ರೂ., ಆರೂರು ಗ್ರಾಮದ ವನಜ ಪೂಜಾರ್ತಿ ಎಂಬವರಿಗೆ 15,000ರೂ., ಹೇರಾಡಿ ಗ್ರಾಮದ ಸವಿತಾ ಎಂಬ ವರಿಗೆ 20,000ರೂ., ಶಿರಿಯಾರ ಗ್ರಾಮದ ಶ್ರೀನಿವಾಸ ಪೂಜಾರಿಗೆ 15,000 ರೂ., ಕುಂದಾಪುರ ತಾಲೂಕಿನ ಕುಳಂಜೆ ಗ್ರಾಮದ ನಾರಾಯಣ ಪೂಜಾರಿ ಎಂಬವರಿಗೆ 75,000ರೂ., ಕಟ್ಬೇಲ್ತೂರು ಗ್ರಾಮದ ಮಾನಸ ಎಂಬವರಿಗೆ 80,000ರೂ., ಹೊಸಂಗಡಿ ಗ್ರಾಮದ ದಿಲ್ಸಾದ್ ಬೇಗಂ ಎಂಬವರಿಗೆ 10,000ರೂ., ಬೀಜಾಡಿ ಗ್ರಾಮದ ಮುಹಮ್ಮದ್ ಇರ್ಫಾನ್ ಎಂಬವರಿಗೆ 1,50,000ರೂ. ನಷ್ಟ ಉಂಟಾಗಿದೆ.

ಅಲ್ಲದೆ ಗಾಳಿ ಮಳೆಯಿಂದಾಗಿ ಜಿಲ್ಲೆಯಾದ್ಯಂತ 21 ವಿದ್ಯುತ್ ಕಂಬಗಳು, 7 ಟ್ರಾನ್ಸ್ ಫಾರ್ಮರ್‌ಗಳು ಹಾಗೂ 1.17 ಕಿ.ಮೀ. ಉದ್ದದ ವಿದ್ಯುತ್ ತಂತಿಗೆ ಹಾನಿ ಯಾಗಿದ್ದು, ಇದರಿಂದ ಮೆಸ್ಕಾಂಗೆ ಒಟ್ಟು 10.28 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News