×
Ad

ಅಶಕ್ತರ ನಿವಾಸಕ್ಕೆ ತೆರಳಿ ಲಸಿಕೆ ನೀಡಲು ದ.ಕ.ಜಿಲ್ಲಾಡಳಿತ ನಿರ್ಧಾರ: ಡಿಸಿ ಡಾ.ರಾಜೇಂದ್ರ

Update: 2021-06-18 21:43 IST

ಮಂಗಳೂರು, ಜೂ.18: ಅನಾರೋಗ್ಯ ಪೀಡಿತರು ಮತ್ತು ಅಶಕ್ತ ಹಿರಿಯ ನಾಗರಿಕರ ಸಹಿತ ಮನೆಯಿಂದ ಹೊರ ಬಂದು ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗದಿರುವವರ ಮನೆ ಮನೆಗೆ ತೆರಳು ಉಚಿತ ಲಸಿಕೆ ನೀಡಲು ದ.ಕ. ಜಿಲ್ಲಾಡಳಿತ ನಿರ್ಧರಿಸಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.

ದ.ಕ. ಜಿಲ್ಲಾಡಳಿತ, ದ.ಕ. ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆ, ರೋಟರಿ ಮಂಗಳೂರು ಹಾಗೂ ಬ್ಯಾಂಕ್ ಆಫ್ ಬರೋಡಾದ ಸಹಯೋಗ ದೊಂದಿಗೆ ಆರೋಗ್ಯ ಕಾರ್ಯಕರ್ತರು ಮನೆಮನೆಗೆ ತೆರಳಿ ಲಸಿಕೆ ಹಾಕಲಿರುವರು. ಹೀಗಾಗಿ ಜಿಲ್ಲಾಡಳಿತದ ವೆಬ್‌ಸೈಟ್ ನಲ್ಲಿ ಹೆಸರು ನೋಂದಾಯಿಸಲು ಸೂಚಿಸಿದೆ. ನೋಂದಣಿಯ ಬಳಿಕ ದಿನ ನಿಗದಿಪಡಿಸಿ ಮನೆ ಮನೆಗೆ ಬಂದು ಲಸಿಕೆ ನೀಡಲಾಗುವುದು. ಮನೆ ಮನೆ ಲಸಿಕೆ ವಾಹನಕ್ಕೆ ಜೂ.19ರಂದು ಬೆಳಗ್ಗೆ 9:30ಕ್ಕೆ ನಗರದ ಹಂಪನಕಟ್ಟೆಯಲ್ಲಿರುವ ಯುನಿವರ್ಸಿಟಿ ಕಾಲೇಜಿನ ಆವರಣದಲ್ಲಿ ಚಾಲನೆ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News