×
Ad

ಕ್ಯಾಶಿಯರ್ ವಿರುದ್ಧ ಮಾಲಕ ದೂರು

Update: 2021-06-18 21:57 IST

ಮಂಗಳೂರು, ಜೂ.18: ನಗರದ ಯೆಯ್ಯಡಿಯಲ್ಲಿರುವ ಮಧುವನ ಬಾರ್ ಆ್ಯಂಡ್ ರೆಸ್ಟೋರೆಂಟ್‌ನ ಪಾರ್ಸಲ್ ಕೌಂಟರ್‌ನಲ್ಲಿ ಮ್ಯಾನೇಜರ್/ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ಭಂಡಾರಿ ಎಂಬಾತ ವಂಚಿಸಿದ ಬಗ್ಗೆ ರೆಸ್ಟೋರೆಂಟ್‌ನ ಮಾಲಕ ಡೇನ್ ಜಿ. ಡಿಸೋಜ ಕದ್ರಿ ಠಾಣೆಗೆ ದೂರು ನೀಡಿದ್ದಾರೆ.

ಆರೋಪಿಯು 2019ರ ಜನವರಿ 1ರಿಂದ ಈ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಗ್ರಾಹಕರಿಗೆ ಕಂಪ್ಯೂಟರೀಕೃತ ಬಿಲ್ಗಳನ್ನು ನೀಡಿ ಹಣವನ್ನು ತನ್ನ ಸ್ವಂತಕ್ಕೆ ಉಪಯೋಗಿಸಿ ಕಂಪ್ಯೂಟರ್‌ನಲ್ಲಿ ನೀಡಿದ ಬಿಲ್ಗಳನ್ನು ಅಳಿಸಿ ನಂತರ ನಕಲಿ ಲೆಕ್ಕ ಪತ್ರ ತಯಾರಿಸಿ 2019ರ ಜನವರಿಯಿಂದ 2021ರ ಜನವರಿ 27ರ ಅವಧಿಯಲ್ಲಿ ಸಂಸ್ಥೆಗೆ ಸುಮಾರು 10 ಲಕ್ಷ ರೂ. ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

2020ರ ಜನವರಿಯಿಂದ 2021ರ ಜನವರಿ 27ರವರೆಗೆ 4,97,417 ರೂ.ವನ್ನು ವಂಚನೆಗೈದು ತನ್ನ ಸ್ವಂತಕ್ಕೆ ಬಳಸಿರುವ ಬಗ್ಗೆ ದಾಖಲೆಗಳು ಸಂಸ್ಥೆಯ ಕಂಪ್ಯೂಟರ್‌ನಲ್ಲಿ ಪತ್ತೆಯಾಗಿವೆ. ಹಾಗಾಗಿ ಆರೋಪಿಯ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News