ಮೈಸೂರು ಅಂತಾರಾಷ್ಟ್ರೀಯ ವಾಟರ್ ಫಿಲಂ ಫೆಸ್ಟಿವಲ್ : ಶ್ರೀದೇವಿ ಕಾಲೇಜು ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಗೆ ಆಯ್ಕೆ

Update: 2021-06-18 16:41 GMT

ಮಂಗಳೂರು, ಜೂ.18: ಫಿಲಂ ಹೋಲಿಕ್ ಸಂಸ್ಥೆಯು ಆಯೋಜಿಸಿದ್ದ 2021ನೇ ಸಾಲಿನ ಮೈಸೂರು ಅಂತಾರಾಷ್ಟ್ರೀಯ ವಾಟರ್ ಫಿಲಂ ಫೆಸ್ಟಿವಲ್‌ನಲ್ಲಿ ಮಂಗಳೂರಿನ ಪ್ರತಿಷ್ಠಿತ ಶ್ರೀದೇವಿ ತಾಂತ್ರಿಕ ವಿದ್ಯಾನಿಲಯದ ಎಂಸಿಎ ವಿಭಾಗದ ವಿದ್ಯಾರ್ಥಿಗಳು ನಿರ್ಮಿಸಿದ ಕಿರುಚಿತ್ರ CASE NO :1/2 ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ.

ಈ ಚಿತ್ರವು ನೀರಿನ ಉಳಿವು ಹಾಗೂ ಜಲದ ಮಹತ್ವದ ಬಗ್ಗೆ ತಿಳಿಸಿಕೊಡುವ ಚಿತ್ರವಾಗಿದೆ. ಈ ಕಿರುಚಿತ್ರಕ್ಕೆ ಪ್ರಪೂಜ್ ಇಚ್ಚಂಗಿ ಕಥೆ- ಚಿತ್ರಕಥೆ- ಸಂಕಲನ- ನಿರ್ದೇಶನ ಮಾಡಿದ್ದು, ಶರತ್ ಬಿ.ಎನ್. ಅವರ ಛಾಯಾಗ್ರಹಣವಿದೆ. ತಂಡದಲ್ಲಿ ಶರತ್, ರುದ್ರೇಶ್, ಶ್ರೇಯಾ, ಐಶ್ವರ್ಯ, ಲಿಖಿತ್, ಕಿರಣ್, ವಿಷ್ಣು, ನಿಖಿಲ್, ಹರಿಹರನ್, ಧನುಷ್, ಪ್ರಪೂಜ್, ಲಿಖಿತ್, ಶರತ್, ರುದ್ರೇಶ್ ಇದ್ದಾರೆ. ಧ್ವನಿ ಕಲಾವಿದರಾಗಿ ಐಶ್ವರ್ಯ ಮತ್ತು ಲಿಖಿತ್ ಭಾಗವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News