​ಮನಪಾ ನೌಕರರಿಗೆ ಸಮವಸ್ತ್ರ ಕಡ್ಡಾಯಕ್ಕೆ ಜೆಡಿಯು ಆಗ್ರಹ

Update: 2021-06-19 12:19 GMT

ಮಂಗಳೂರು, ಜೂ19: ಇತ್ತೀಚೆಗೆ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳ ಸೋಗಿನಲ್ಲಿ ಕೆಲವರು ಬಂದು ಅಂಗಡಿ ಮಾಲಕರ ಮೇಲೆ ಆರೋಪ ಹೊರಿಸಿ, ಹಣ ಸಂಗ್ರಹಿಸುತ್ತಿರುವುದು ಖಂಡನೀಯ. ಪಾಲಿಕೆಯಲ್ಲಿ ಸಾರ್ವಜನಿಕರಿಗೆ ಅಲ್ಲಿನ ಅಧಿಕಾರಿಗಳು ಮತ್ತು ನೌಕರರನ್ನು ಗುರುತಿಸುವುದು ಕಷ್ಟವಾಗುತ್ತಿದೆ. ಅಧಿಕಾರಿಗಳ ಹೆಸರು ಕೂಡ ತಿಳಿಯುತ್ತಿಲ್ಲ. ಇಲ್ಲಿನ ನೌಕರರು ಮತ್ತು ಅಧಿಕಾರಿಗಳಿಗೆ ಸಮವಸ್ತ್ರ ಕಡ್ಡಾಯಗೊಳಿಸಬೇಕು ಎಂದು ಜೆಡಿಯು ಆಗ್ರಹಿಸಿದೆ.

ಪಾಲಿಕೆಯ ಸಿಬ್ಬಂದಿಗೆ ಸಮವಸ್ತ್ರದ ವ್ಯವಸ್ಥೆ ಹಾಗೂ ಅವರ ಹೆಸರು ಸಮವಸ್ತ್ರದ ಮೇಲೆ ಸಾರ್ವಜನಿಕರಿಗೆ ತಿಳಿಯುವಂತೆ ಮಾಡಿದಲ್ಲಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಅವರನ್ನು ಗುರುತಿಸಲು ಸುಲಭವಾಗುವುದರಿಂದ ಸಮವಸ್ತ್ರವನ್ನು ಕಡ್ಡಾಯಗೊಳಿಸಬೇಕು. ಇದರಿಂದ ನಕಲಿ ಅಧಿಕಾರಿಗಳನ್ನು ಕೂಡಲೇ ಗುರುತಿಸಬಹುದು ಎಂದು ಜೆಡಿಯು ಜಿಲ್ಲಾ ಮುಖಂಡ ಸುಜಿತ್‌ಕುಮಾರ್ ಪೂಜಾರಿ ತಿಳಿಸಿದ್ದಾರೆ.

ಮನಪಾದ ಎಲ್ಲ ಸದಸ್ಯರು ಮತ್ತು ಮೇಯರ್ ಅವರಿಗೂ ಸಮವಸ್ತ್ರ ಕಡ್ಡಾಯಗೊಳಿಸಬೇಕು. ಇದರಿಂದಾಗಿ ಸಾರ್ವಜನಿಕರಿಗೆ ಮನಪಾ ಸದಸ್ಯರನ್ನು ಗುರುತಿಸಲು ಸುಲಭವಾಗುತ್ತದೆ. ಹೆಚ್ಚಿನ ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳಲ್ಲಿ ನೌಕರರಿಗೆ ಸಮವಸ್ತ್ರದ ವ್ಯವಸ್ಥೆ ಇದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಭ್ರಷ್ಟಾಚಾರ ತಡೆಗಟ್ಟಲು ಮನಪಾದ ಎಲ್ಲರಿಗೂ ಸಮವಸ್ತ್ರ ಕಡ್ಡಾಯಗೊಳಿಸಬೇಕು. ಸಾರ್ವಜನಿಕರಿಗೆ ಹಾಗೂ ಅಂಗಡಿ ಮಾಲಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಜೆಡಿಯು ಜಿಲ್ಲಾ ಮುಖಂಡ ಸುಪ್ರೀತ್‌ ಕುಮಾರ್ ಪೂಜಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News