×
Ad

ಎನ್‌ಎಸ್‌ಯುಐನಿಂದ ಬಟ್ಟೆಬರೆ ವಿತರಣೆ

Update: 2021-06-19 20:23 IST

ಮಂಗಳೂರು, ಜೂ.19: ಎಐಸಿಸಿ ವರಿಷ್ಠ ರಾಹುಲ್ ಗಾಂಧಿಯ ಹುಟ್ಟು ಹಬ್ಬದ ಪ್ರಯುಕ್ತ ಎನ್‌ಎಸ್‌ಯುಐ ದ.ಕ. ಜಿಲ್ಲಾ ಸಮಿತಿಯು ಸಂಗ್ರಹಿಸಿದ ಬಟ್ಟೆಗಳನ್ನು ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ 500ಕ್ಕೂ ಹೆಚ್ಚು ನಿರ್ಗತಿಕರಿಗೆ ಹಾಗೂ ನಿರಾಶ್ರಿತರಿಗೆ ಶನಿವಾರ ನಗರದ ಸ್ಟೇಟ್‌ಬ್ಯಾಂಕ್ ಪರಿಸರದಲ್ಲಿ ವಿತರಿಸಲಾಯಿತು.

ಈ ಸಂದರ್ಭ ಎನ್‌ಎಸ್‌ಯುಐ ದ.ಕ.ಜಿಲ್ಲಾಧ್ಯಕ್ಷ ಸವಾದ್ ಸುಳ್ಯ, ಮುಖಂಡರಾದ ಫಾರೂಕ ಬಯಬೆ, ಅಂಕುಶ್ ಶೆಟ್ಟಿ, ಬಾತಿಷ್ ಅಳಕೆಮಜಲು, ನಿಖಿಲ್ ಪೂಜಾರಿ, ತಮೀಝ್ ಅಳಕೆಮಜಲು, ಅಯಾಝ್ ಚಾರ್ಮಾಡಿ, ಯಶವಂತ್ ಅಡ್ಯಡ್ಕ, ನಜೀಬ್ ಮಂಚಿ, ಸಮಾಜ ಸೇವಕರಾದ ಸುಹಾನ್ ಆಳ್ವ, ಅನ್ಸಾರುದ್ದೀನ್ ಸಾಲ್ಮರ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News