ಬೈಂದೂರು: ಅಧಿಕೃತ ಶಾಲೆಗಳಲ್ಲಿ ಮಕ್ಕಳ ದಾಖಲಾತಿಗೆ ಸೂಚನೆ

Update: 2021-06-19 15:17 GMT

ಉಡುಪಿ, ಜೂ.19: ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರು ಅಧಿಕೃತ ಶಾಲೆಗಳಲ್ಲಿ ಮಾತ್ರ ತಮ್ಮ ಮಕ್ಕಳನ್ನು ದಾಖಲಾತಿ ಮಾಡುವಂತೆ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಧಿಕೃತ ಅನುದಾನಿತ ಪ್ರೌಢ ಶಾಲೆಗಳು: ಬೈಂದೂರಿನ ರತ್ತುಬಾಯಿ ಜನತಾ ಪ್ರೌಢಶಾಲೆ, ಹೆಮ್ಮಾಡಿಯ ಜನತಾ ಪ್ರೌಢಶಾಲೆ, ನಾಡದ ಗ್ರೆಗರಿ ಪ್ರೌಢಶಾಲೆ, ಕೊಲ್ಲೂರಿನ ಶ್ರೀ ಮೂಕಾಂಬಿಕಾ ಟೆಂಪಲ್ ಪ್ರೌಢಶಾಲೆ, ಮುದೂರಿನ ಭಾರತ್ ಮಾತಾ ಪ್ರೌಢಶಾಲೆ.

ಅನುದಾನಿತ ಪ್ರಾಥಮಿಕ ಶಾಲೆಗಳು: ಮೈಯಾಡಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆ, ಮುದೂರು ಶ್ರೀಮಾತಾ ಹಿರಿಯ ಪ್ರಾಥಮಿಕ ಶಾಲೆ, ಪಡುಕೋಣೆಯ ಸೇಂಟ್ ಅಂತೋನಿ ಹಿರಿಯ ಪ್ರಾಥಮಿಕ ಶಾಲೆ, ಗುಡ್ಡೆಅಂಗಡಿಯ ಸೇಂಟ್ ಅಂತೋನಿ ಕಿರಿಯ ಪ್ರಾಥಮಿಕ ಶಾಲೆ, ಬಂಟ್ವಾಡಿಯ ನ್ಯೂಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಆಲೂರು ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆ, ಮೂಡಮುಂದ ಶಾರದ ಹಿರಿಯ ಪ್ರಾಥಮಿಕ ಶಾಲೆ. ಪಡುವರಿಯ ಹೋಲಿಕ್ರಾಸ್ ಹಿರಿಯ ಪ್ರಾಥಮಿಕ ಶಾಲೆ, ತ್ರಾಸಿಯ ಕಲ್ಲಾನಿ ಹಿರಿಯ ಪ್ರಾಥಮಿಕ ಶಾಲೆ, ಗುಲ್ವಾಡಿಯ ಸರ್ವೋದಯ ಹಿರಿಯ ಪ್ರಾಥಮಿಕ ಶಾಲೆ.

ಅನುದಾನ ರಹಿತ ಪ್ರಾಥಮಿಕ ಶಾಲೆಗಳು: ಅರೆಶಿರೂರಿನ ಶ್ರೀಮೂಕಾಂಬಿಕ ಟೆಂಪಲ್ ಪ್ರೌಢಶಾಲೆ, ಬೀಸಿನಪಾರೆಯ ಶ್ರೀಮೂಕಾಂಬಿಕ ಟೆಂಪಲ್ ಪ್ರೌಢಶಾಲೆ, ಕೊಡ್ಲಾಡಿಯ ಶ್ರೀಮೂಕಾಂಬಿಕ ಟೆಂಪಲ್ ಪ್ರೌಢಶಾಲೆ, ಮಾವಿನಕಟ್ಟೆಯ ಶ್ರೀಮೂಕಾಂಬಿಕ ಟೆಂಪಲ್ ಪ್ರೌಢಶಾಲೆ, ಹೊಸೂರಿನ ಶ್ರೀ ಮೂಕಾಂಬಿಕ ಟೆಂಪಲ್ ಪ್ರೌಢಶಾಲೆ, ಬದಕೋಣೆಯ ಸಂದೀಪನ ಆಂಗ್ಲ ಮಾಧ್ಯಮ ಶಾಲೆ, ಬೈಂದೂರಿನ ಹೆಚ್.ಎಮ್.ಎಮ್.ಎಸ್ ಆಂಗ್ಲ ಮಾಧ್ಯಮ ಶಾಲೆ, ಉಪ್ಪುಂದದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ನಾವುಂದದ ಶುಭದ ಆಂಗ್ಲ ಮಾಧ್ಯಮ ಶಾಲೆ, ಶಿರೂರಿನ ತೌಹೀದ್ ಪಬ್ಲಿಕ್ ಸ್ಕೂಲ್, ತಲ್ಲೂರು ಜಯರಾಣಿ, ಪಡುವರಿ ಹೋಲಿ ಕ್ರಾಸ್ ಆಂಗ್ಲ ಮಾಧ್ಯಮ ಶಾಲೆ, ಬೈಂದೂರು ಸೌಖ್ಯ, ಶಿರೂರು ಸ್ಥಿರಾಸ್ತೆ ಮುಸ್ತಕೀಮ್.
ಹೊಸಾಡು ಸತ್ಯಸಾಯಿ ಹಿರಿಯ ಪ್ರಾಥಮಿಕ ಶಾಲೆ, ತ್ರಾಸಿಯ ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಶಾಲೆ, ಬೈಂದೂರಿನ ಸೇಂಟ್ ಥೋಮಸ್ ಆಂಗ್ಲ ಮಾಧ್ಯಮ ಶಾಲೆ, ಶಿರೂರಿನ ಗ್ರೀನ್‌ವ್ಯಾಲಿ ನ್ಯಾಷನಲ್ ಸ್ಕೂಲ್, ಮಾವಿಮನೆಯ ಶ್ರೀಮೂಕಾಂಬಿಕ ಶಾಲೆ, ಹಟ್ಟಿಯಂಗಡಿಯ ಶ್ರೀ ಸಿದ್ದಿ ವಿನಾಯಕ ವಸತಿ ಶಾಲೆ, ಜಡ್ಕಲ್‌ನ ಸೆಕ್ರೇಟ್‌ಹಾರ್ಟ್ ಪಬ್ಲಿಕ್ ಸ್ಕೂಲ್, ಶಿರೂರಿನ ಜ್ಞಾನದ ಆಂಗ್ಲ ಮಾಧ್ಯಮ ಶಾಲೆ, ಅತ್ರಾಡಿಯ ವಿಜಯ ಮಕ್ಕಳ ಕೂಟ ಆಂಗ್ಲ ಮಾಧ್ಯಮ ಶಾಲೆ.

ಈ ಶಾಲೆಗಳ ಪಟ್ಟಿಯನ್ನು ಹೊರತು ಪಡಿಸಿ ಬೇರೆ ಯಾವುದೇ ಶಾಲೆಗಳಿಗೆ ಮಕ್ಕಳನ್ನು ದಾಖಲಾತಿ ಮಾಡಿದರೆ ಶಿಕ್ಷಣ ಇಲಾಖೆಯು ಹೊಣೆಗಾರ ರಾಗಿರುವುದಿಲ್ಲ ಎಂದು ಬೈಂದೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News