ಉಡುಪಿ: ಲಾಕ್‌ಡೌನ್ ಸಡಿಲಿಕೆಯಲ್ಲೂ ಶೇ.5ಕ್ಕಿಂತ ಕಡಿಮೆಯಾಗದ ಪಾಸಿಟಿವಿಟಿ ಪ್ರಮಾಣ

Update: 2021-06-19 15:43 GMT

ಉಡುಪಿ, ಜೂ.19: ಉಡುಪಿ ಜಿಲ್ಲೆಯಲ್ಲಿ ಜೂ.11ರಿಂದ ಮಾಡಲಾಗಿರುವ ಲಾಕ್‌ಡೌನ್ ಸಡಿಲಿಕೆಯಲ್ಲೂ ಪಾಸಿಟಿವಿಟಿ ಪ್ರಮಾಣ ಶೇ.5ಕ್ಕಿಂತ ಕಡಿಮೆ ಯಾಗದ ಪರಿಣಾಮ ಮತ್ತೆ ಅದೇ ಆದೇಶವನ್ನು ಮುಂದುವರೆಸಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಜೂ.12ರಂದು ಶೇ.7.44(ಪರೀಕ್ಷೆ- 3025- ಪಾಸಿಟಿವ್-225), ಜೂ.13ರಂದು ಶೇ.8.18(1454-119), ಜೂ.14ರಂದು ಶೇ. 5.68(2096-119), ಜೂ.15ರಂದು ಶೇ.4.38(3358-147), ಜೂ.16ರಂದು ಶೇ.5.01(3274-164), ಜೂ.17ರಂದು ಶೇ.5.44(3473- 189), ಜೂ.18ರಂದು ಶೇ.5.05(ಪರೀಕ್ಷೆ- 3464, ಪಾಸಿಟಿವ್-175) ಪಾಸಿಟಿವಿಟಿ ಪ್ರಮಾಣ ದಾಖಲಾಗಿದೆ.

‘ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.5ಕ್ಕಿಂತ ಕಡಿಮೆ ಬರಬೇಕೆಂಬುದು ನಮ್ಮ ಗುರಿಯಾಗಿತ್ತು. ಆದರೆ ಶೇ.5ಕ್ಕಿಂತ ಕೆಲವು ಪಾಯಿಂಟ್‌ನಲ್ಲಿ ನಾವು ಮೇಲೆ ಇದ್ದೇವೆ. ಲಾಕ್‌ಡೌನ್ ಸಡಿಲಿಕೆ ಮಾಡಿದರೂ ನಾವು ನಿರೀಕ್ಷಿಸಿರುವ ಪ್ರಮಾಣ ದಲ್ಲಿ ಪಾಸಿಟಿವಿಟಿ ಪ್ರಮಾಣ ಇಳಿಕೆಯಾಗಿಲ್ಲ. ಕಳೆದ ಒಂದು ವಾರದಿಂದ ಶೇ.5 ರಲ್ಲಿಯೇ ಇದ್ದೇವೆ. ಹಾಗಾಗಿ ಮುಂದೆ ನಾವು ಇನ್ನಷ್ಟು ಎಚ್ಚರಿಕೆ ತೆಗೆದುಕೊಳ್ಳ ಬೇಕಾಗಿದೆ’ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಸದ್ಯ ನಮ್ಮ ಜಿಲ್ಲೆಯಲ್ಲಿ ಜೂ.11ರ ಲಾಕ್‌ಡೌನ್ ಸಡಿಲಿಕೆ ಆದೇಶವೇ ಮುಂದುವರೆಯಲಿದೆ. ಬೆಳಗ್ಗೆ 6ಗಂಟೆಯಿಂದ ಮಧ್ಯಾಹ್ನ 2ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿಡಲು ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News