ಪೊಲೀಸ್ ಲಿಖಿತ ಪರೀಕ್ಷೆಯಲ್ಲಿ ವಂಚನೆ: ದೂರು

Update: 2021-06-19 15:59 GMT

ಮಲ್ಪೆ, ಜೂ.19: ಪೊಲೀಸ್ ಲಿಖಿತ ಪರೀಕ್ಷೆಯಲ್ಲಿ ಅರ್ಜಿ ಸಲ್ಲಿಸಿದ ವ್ಯಕ್ತಿಯ ಬದಲು ಬೇರೆ ವ್ಯಕ್ತಿ ಪರೀಕ್ಷೆ ಬರೆಯುವ ಮೂಲಕ ವಂಚನೆ ಎಸಗಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2020ರ ಅ.18ರಂದು ಕಲ್ಯಾಣಪುರ ಸಂತೆಕಟ್ಟೆಯ ಮೌಂಟ್ ರೋಜಾರಿ ಶಾಲೆಯಲ್ಲಿ ಕರ್ನಾಟಕ ರಾಜ್ಯ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ನಡೆದಿದ್ದು, ಅದರಲ್ಲಿ ಅರ್ಜಿ ಸಲ್ಲಿಸಿದ್ದ ಪ್ರವೀಣ್ ಖೋಟ್ ಎಂಬಾತನ ಬದಲಿಗೆ ಇನ್ನೊಬ್ಬ ವ್ಯಕ್ತಿಯು ಲಿಖಿತ ಪರೀಕ್ಷೆ ಬರೆದಿದ್ದನು.

ಬಳಿಕ 2020ರ ಡಿ.19ರಂದು ಧಾರವಾಡದಲ್ಲಿ ನಡೆದ ದೇಹದಾಡ್ಯತೆ ಹಾಗೂ ಸಹಿಷ್ಣುತೆ ಪರೀಕ್ಷೆಯಲ್ಲಿ ಮತ್ತು 2021ರ ಜ.13ರಂದು ವೈಧ್ಯಕೀಯ ಪರೀಕ್ಷೆಯಲ್ಲಿ ಪ್ರವೀಣ್ ಖೋಟ್ ಹಾಜರಾಗಿದ್ದನು. ಈ ವಿಚಾರವು ಲಿಖಿತ ಪರೀಕ್ಷೆಯಲ್ಲಿ ಹಾಜರಾಗಿರುವ ಅಭ್ಯರ್ಥಿಯ ಹೆಬ್ಬೆಟ್ಟಿನ ಬೆರಳು ಮುದ್ರೆ ಹಾಗೂ ಧಾರವಾಡದಲ್ಲಿ ನಡೆದ ದೇಹದಾಡ್ಯತೆ ಮತ್ತು ವೈಧ್ಯಕೀಯ ಪರೀಕ್ಷೆಯಲ್ಲಿ ಹಾಜರಾದ ಅಭ್ಯರ್ಥಿಯ ಹೆಬ್ಬೆಟ್ಟಿನ ಬೆರಳು ಮುದ್ರೆ ಹೊಂದಾಣಿಕೆ ಅಗದೆ ಇರುವುದರಿಂದ ಬೆಳಕಿಗೆ ಬಂತು. ಪ್ರವೀಣ್ ಖೋಟ್ ಪೊಲೀಸ್ ನೇಮಕಾತಿ ಹೊಂದುವ ಉದ್ದೇಶದಿಂದ ಈ ರೀತಿ ವಂಚನೆ ಎಸಗಿರುವುದಾಗಿ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News