ಮಂಜನಾಡಿ: ರಾಹುಲ್ ಗಾಂಧಿ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ

Update: 2021-06-19 17:44 GMT

ಮಂಗಳೂರು : ರಾಹುಲ್ ಗಾಂಧಿಯವರ ಹುಟ್ಟು ಹಬ್ಬದ ಪ್ರಯುಕ್ತ ಯುವ ಕಾಂಗ್ರೆಸ್ ಘಟಕ ಮಂಜನಾಡಿ ಮತ್ತು ಮಂಜನಾಡಿ ಗ್ರಾಮ ಕಾಂಗ್ರೆಸ್ ಸಮಿತಿ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಆಶ್ರಯದಲ್ಲಿ ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಮಅದನುಲ್ ಉಲೂಂ ಮದರಸ ಮಂಗಳಾಂತಿ, ಮಂಜನಾಡಿಯಲ್ಲಿ ಶನಿವಾರ ನಡೆಯಿತು.

ಮಂಜನಾಡಿ ಯುವ ಕಾಂಗ್ರೆಸ್ ಘಟಕ ಅಧ್ಯಕ್ಷ ಅಶೀರುದ್ದೀನ್ ಸಾರ್ತಬೈಲ್ ಸ್ವಾಗತಿಸಿದರು. ಮಂಜನಾಡಿ ಗ್ರಾಮ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಮೀದ್ ಮದ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಜಿಲ್ಲಾ ಪಂಚಾಯಿತ್ ಸದಸ್ಯ ಎನ್ ಎಸ್ ಕರೀಂ ರಕ್ತದಾನದ ಮಹತ್ವ, ಯುವಕರ ಸಾಮಾಜಿಕ ಕಾಳಜಿಯ ಬಗ್ಗೆ ಜಾಗೃತಿ ಮೂಡಿಸಿ ಮಾತನಾಡಿ ಶುಭ ಹಾರೈಸಿದರು.

ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಅವರು ಯುವ ಕಾಂಗ್ರೆಸ್ ಗ್ರಾಮ ಸಮಿತಿ ಸದಸ್ಯರಿಗೆ ಕಾಂಗ್ರೆಸ್ ನ ಗುರುತಿನ ಚೀಟಿ ವಿತರಿಸಿ ಅಧ್ಯಕ್ಷೀಯ ಭಾಷಣ ಮಾಡಿದರು.

ಯುವ ಕಾಂಗ್ರೆಸ್ ಉಳ್ಳಾಲ ಬ್ಲಾಕ್ ಅಧ್ಯಕ್ಷ ಫಿರೋಝ್ ಮಲಾರ್, ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ನವಾಝ್ ಕೊಲ್ಲರಕೋಡಿ, ಗ್ರಾಮ ಪಂಚಾಯತ್ ಸದಸ್ಯ ಎಂ. ಎ ಅಬ್ಬಾಸ್, ಯುವ ಕಾಂಗ್ರೆಸ್ ಮಾಜಿ ಜಿಲ್ಲಾ ಕಾರ್ಯದರ್ಶಿ ನಾಸಿರ್ ಸಾಮಣಿಗೆ, ಶುಭ ಹಾರೈಸಿದರು.

ಮಂಜನಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ನಸ್ರೀನ ಇಕ್ಬಾಲ್, ಉಪಾಧ್ಯಕ್ಷ ವಿಲ್ಸನ್ ವೇಗಸ್, ಸದಸ್ಯರಾದ ಮಂಗಳಾಂತಿ ಭಾವು, ಅತ್ತಾವುಲ್ಲಾ ಪೆರ್ತಿಪ್ಪಾಡಿ, ಇಲ್ಯಾಸ್ ಅನ್ಸಾರ್ ನಗರ, ಮೊಯಿದಿನ್ ಕುಂಞಿ, ಅಬ್ದುಲ್ ಕಾದರ್, ಬಶೀರ್ ಆರಂಗಡಿ, ಮಹಮ್ಮದ್ ಅಸೈ, ಮಾಜಿ ಅಧ್ಯಕ್ಷ ಇಸ್ಮಾಯಿಲ್ ದೊಡ್ಡಮನೆ, ಕಾಂಗ್ರೆಸ್ ಗ್ರಾಮ ಸಮಿತಿ ಕಾರ್ಯದರ್ಶಿ ಮೋನು ಕಲ್ಕಟ್ಟ, ಅಶ್ರಫ್ ಮಾರಾಟಿಮೂಲೆ, ಹರೀಶ್, ಡೆನ್ನಿಸ್ ಡಿಸೋಜ, ಮಂಜನಾಡಿ ಯುವ ಕಾಂಗ್ರೆಸ್ ನ ಉಪಾಧ್ಯಕ್ಷ ನಾಸಿರ್ ಮೈಸೂರು, ನಿಝಾರ್ ಮಂಗಳಾಂತಿ, ನಝೀರ್ ಮದ್ಪಾಡಿ, ಖಜಾಂಚಿ ಮುಸ್ತಫ, ಕಾರ್ಯದರ್ಶಿ ಸಫ್ವಾನ್ ಮಂಗಳ ನಗರ, ಮುಝಮ್ಮಿಲ್, ಶಹದ್ ಆಸಿಫ್, ತಾಜುದ್ದೀನ್ , ಶರೀಫ್ ನಕ್ಕರೆ, ಕಾಂಗ್ರೆಸ್ ಬೂತ್ ಅಧ್ಯಕ್ಷ ಆಸಿಫ್ ಯು. ಎಸ್ ಅನ್ಸಾರ್ ನಗರ, ಹಮೀದ್ ಆರಂಗಡಿ, ಬಶೀರ್ ಕಟ್ಟೆಮ್ಮಾರ್, ಬ್ಲಡ್ ಡೋನರ್ಸ್ ಮಂಗಳೂರು ಇದರ ಅಧ್ಯಕ್ಷ  ಸಿದ್ದೀಕ್ ಮಂಜೇಶ್ವರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಂಗ್ರೆಸ್ ನ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.

ಸಭಾ ಕಾರ್ಯಕ್ರಮದ ನಂತರ ಅತಿಥಿಗಳಿಂದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿಲಾಯಿತು. ನೆಲ್ಲಿ ಫರ್ನಾಂಡಿಸ್ ರವರು ರಕ್ತದಾನ ಮಾಡುವ ಮೂಲಕ ಗ್ರಾಮೀಣ ಮಹಿಳೆಯರಿಗೆ ಸ್ಪೂರ್ತಿಯಾದರು ಫಿಲಿಪ್ ರವರು ಮುವತ್ತೈದನೇ ಬಾರಿ ರಕ್ತದಾನ ಮಾಡಿದರು. ಮಂಜನಾಡಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಸಫಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News