ಅರುಣಾಚಲ, ಮಣಿಪುರದಲ್ಲಿ ಮತ್ತೆ ಭೂಕಂಪ

Update: 2021-06-20 03:44 GMT
ಸಾಂದರ್ಭಿಕ ಚಿತ್ರ (source: PTI)

ಹೊಸದಿಲ್ಲಿ, ಜೂ.20: ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ ಮತ್ತು ಮಣಿಪುರದಲ್ಲಿ ರವಿವಾರ ಮುಂಜಾನೆ ಒಂದರ ಹಿಂದೆ ಇನ್ನೊಂದರಂತೆ ಭೂಕಂಪ ಸಂಭವಿಸಿದ್ದು ಜನರಲ್ಲಿ ಭೀತಿ ಉಂಟು ಮಾಡಿದೆ. 3.1-3.6 ತೀವ್ರತೆ ಭೂಕಂಪಗಳು ಸಂಭವಿಸಿವೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಸಂಸ್ಥೆ ಹೇಳಿದೆ. ಆದರೆ ಭೂಕಂಪದಿಂದ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ.

ಎನ್‌ಸಿಎಸ್ ಪ್ರಕಾರ ಮೊದಲ ಭೂಕಂಪ ಅರುಣಾಚಲ ಪ್ರದೇಶದ ಪಂಗಿನ್‌ನಲ್ಲಿ ಮಧ್ಯರಾತ್ರಿ ಬಳಿಕ 1:02 ಗಂಟೆಗೆ ಸಂಭವಿಸಿದೆ. ಬಳಿಕ ಮಣಿಪುರದ ಉಕ್ರುಲ್ ಜಿಲ್ಲೆಯ ಶಿರೂಯಿ ಗ್ರಾಮದಲ್ಲಿ 3.6 ತೀವ್ರತೆಯ ಭೂಕಂಪ ಸಂಭವಿಸಿತು. ಮೊದಲ ಭೂಕಂಪ 20 ಕಿಲೋಮೀಟರ್ ಆಳದಲ್ಲಿ ಮತ್ತು ಎರಡನೇ ಭೂಕಂಪ 30 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ಸಂಸ್ಥೆ ಹೇಳಿದೆ.

ಮುಂಜಾನೆ 5:41ರ ಸುಮಾರಿಗೆ ಮತ್ತೊಂದು ಲಘು ಭೂಕಂಪ ಸಂಭವಿಸಿದ್ದು, ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.1ರಷ್ಟಿತ್ತು. ಉತ್ತರಾಖಂಡದ ಉತ್ತರಕಾಶಿಯಿಂದ ಉತ್ತರಕ್ಕೆ 62 ಕಿಲೋಮೀಟರ್ ದೂರದಲ್ಲಿ ಈ ಭೂಕಂಪ ಸುಮಾರು 15 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ಎನ್‌ಸಿಎಸ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News