×
Ad

ಹೂಹಾಕುವಕಲ್ಲಿನಲ್ಲಿ ರಕ್ತದಾನ ಶಿಬಿರ

Update: 2021-06-20 12:38 IST

ಕೊಣಾಜೆ, ಜೂ.20: ಮುಡಿಪು ಬ್ಲಾಕ್ ಯುವ ಕಾಂಗ್ರೆಸ್, ಉಳ್ಳಾಲ ಯುವ ಕಾಂಗ್ರೆಸ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ವತಿಯಿಂದ 300ನೇ ರಕ್ತದಾನ ಶಿಬಿರವು ರವಿವಾರ ಹೂಹಾಕುವಕಲ್ಲಿನ ಎಸ್ .ಕೆ . ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಜೇಶ್ವರ ಶಾಸಕ ಎ.ಕೆ.ಅಶ್ರಪ್ ಮಾತನಾಡಿ, ಕೋವಿಡ್ ಸಂಕಷ್ಟದ ಕಾಲದಲ್ಲಿ ಯುವ ಕಾಂಗ್ರೆಸ್  ರಕ್ತದಾನ ಕಾರ್ಯಕ್ರಮದ ಮೂಲಕ ಮಹೋನ್ನತ ಪಾತ್ರವನ್ನು ವಹಿಸಿದೆ. ಬ್ಲಡ್ ಡೋನರ್ಸ್ ಸಂಸ್ಥೆಯ ಕೆಲಸವು ಮಾದರಿಯಾಗಿದೆ ಎಂದರು.

ಶಾಸಕ ಯು.ಟಿ.ಖಾದರ್ ಮಾತನಾಡಿ ಶುಭ ಹಾರೈಸಿದರು.

 ರಾಜ್ಯ ಯುವ ಕಾಂಗ್ರೆಸ್ ನ ದೀಪಿಕಾ ರೆಡ್ಡಿ ಉದ್ಘಾಟನಾ ಭಾಷಣ ಮಾಡಿದರು.

ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಮುಖಂಡರಾದ ಸಿದ್ದೀಕ್ ಮಂಜೇಶ್ವರ, ಸಿದ್ದೀಕ್ ಪಾರೆ, ನಝರ್ ಷಾ, ಹನೀಫ್ ಶೈನ್, ಆಯಿಷಾ ಉಳ್ಳಾಲ, ಯೂಸುಫ್ ಪಾಣೇಲ, ಚಂಚಲಾಕ್ಷಿ, ಹಮೀದ್ ಮಂಜನಾಡಿ, ನಾಸಿರ್ ಟಿ.ಎಸ್. ಸಾಮಣಿಗೆ, ಅಬ್ದುಲ್ ಜಲೀಲ್ ಮೋಂಟುಗೋಳಿ, ನವಾಝ್ ಮೋಂಟುಗೋಳಿ, ಎನ್.ಎಸ್.ಕರೀಂ, ಶೌಕತ್ ಆಲಿ, ಅಬ್ದುಲ್ ರಹಿಮಾನ್ ಕೊಣಾಜೆ, ಪದ್ಮನಾಭ ನರಿಂಗಾನ, ಸಮೀರ್ ಪಜೀರು, ಜೆಸಿಂತಾ ಪಿಂಟೋ, ಬದ್ರುದ್ದೀನ್, ಹನೀಫ್, ನವಾಝ್ ಕಲ್ಲರಕೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಫಿರೋಝ್ ಮಲಾರ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News