ಕಾರ್ಕಳ ತಾಲೂಕು ಪತ್ರಕರ್ತರ ಸಂಘಕ್ಕೆ ರಾಜ್ಯ ಸಂಘದಿಂದ ಅಗತ್ಯ ಸಹಕಾರ: ತಗಡೂರು

Update: 2021-06-20 07:46 GMT

ಕಾರ್ಕಳ, ಜೂ.20: ರಾಜ್ಯ ಪತ್ರಕರ್ತರ ಸಂಘದಿಂದ ರಾಜ್ಯದ ಗ್ರಾಮೀಣ ಭಾಗ ಹಾಗೂ ಇತರೆಡೆಯ ಪತ್ರಕರ್ತರಿಗೆ ಹಲವು ರೀತಿಯ ಸಹಾಯ ಯೋಜನೆಗಳಿವೆ. ಅವುಗಳನ್ನು ಸಂಘದ ಸದಸ್ಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.

 ಇಲ್ಲಿನ ಪ್ರವಾಸಿ ಮಂದಿರಲ್ಲಿ ಶನಿವಾರ ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳೊಂದಿಗೆ ಮಾತನಾಡಿದ ಅವರು ಕಾರ್ಕಳ ಪತ್ರಕರ್ತರ ಸಂಘಕ್ಕೆ ಅವಶ್ಯವಿರುವ ಯೋಜನೆಗಳನ್ನು ಸರ್ಕಾರದ ನೆಲೆಯಲ್ಲಿ ಪ್ರಯತ್ನಿಸಿ ಅನುಷ್ಠಾನಗಳಿಸಲಾಗುವುದು. ಪತ್ರಕರ್ತರ ಸಂಘದ ಸದಸ್ಯರಿಗೆ ರಾಜ್ಯ ಸಂಘದಿಂದ ಲಭ್ಯವಾಗುವ ಸೌಲಭ್ಯ, ಆರೋಗ್ಯ ವಿಮೆ, ಬಸ್ ಪಾಸ್ ವ್ಯವಸ್ಥೆ, ನಿವೃತ್ತ ಪತ್ರಕರ್ತರಿಗೆ ಪಿಂಚಣಿ ಯೋಜನೆ , 

ಮೊದಲಾದವುಗಳ ಕುರಿತು ಮಹಿತಿ ನೀಡಿದರು.

ರಾಜ್ಯಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಪತ್ರಕರ್ತರ ಸಮಸ್ಯೆಗಳ ಪರಿಹಾರ ಮೊದಲಾಗಿ ವಿವಿಧ ಯೋಜನೆಗಳ ಕುರಿತು ಯೋಜನೆಕೈಗೊಳ್ಳಲು ಸಹಕಾರಿಯಾಗಲಿದೆ. ರಾಜ್ಯ ಪತ್ರಕರ್ತರ ಸಂಘದಿಂದ ಎಲ್ಲ ಬಗೆಯ ಸಹಕಾರ ನೀಡಲಾಗುವುದು ಎಂದರು.

  ರಾಜ್ಯ ಸಂಘದ ಪದಾಧಿಕಾರಿ ಮದನ್ ಗೌಡ ಮಾತನಾಡಿ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ನೀಡಲಾಗುವ ಸೌಲಭ್ಯಗಳ ಮಾಹಿತಿ ನೀಡಿದರು.

ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇವರಿಬ್ಬರನ್ನು ಇದೇವೇಳೆ ಅಭಿನಂದಿಸಲಾಯಿತು.

 ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಮುಹಮ್ಮದ್ ಶರೀಫ್  ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಮಾಜಿ ಅಧ್ಯಕ್ಷ ಜಗದೀಶ ಆರ್‌.ಬಿ., ಜಿಲ್ಲಾ ಸಂಘದ ಹರಿಪ್ರಸಾದ್ ನಂದಳಿಕೆ ಉಪಸ್ಥಿತರಿದ್ದರು. ಕಾರ್ಯದರ್ಶಿ ಕೃಷ್ಣ ನಾಯ್ಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News