ಉಡುಪಿ; ರಾ.ಹೆ.66ರಲ್ಲಿ 4 ಫೂಟ್ ಓವರ್ ಬ್ರಿಡ್ಜ್‌ಗೆ 4.36ಕೋ.ರೂ. ಅನುದಾನ ಮಂಜೂರು: ಶೋಭಾ ಕರಂದ್ಲಾಜೆ

Update: 2021-06-20 13:50 GMT

ಉಡುಪಿ, ಜೂ.18: ಉಡುಪಿ ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರ ನಾಲ್ಕು ಪ್ರದೇಶಗಳಲ್ಲಿ ಒಟ್ಟು 4.36ರೂ. ಕೋಟಿ ರೂ. ವೆಚ್ಚದಲ್ಲಿ ಪಾದಚಾರಿ ಕಾಲು ಸೇತುವೆಗಳನ್ನು ನಿರ್ಮಿಸಲು ಕೇಂದ್ರ ಭೂ ಸಾರಿಗೆ ಸಚಿವರು ಅನುಮೋದನೆ ನೀಡಿ ಅನುದಾನ ಮಂಜೂರು ಮಾಡಿದ್ದಾರೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಕಾಪು ವಿಧಾನಸಭಾ ಕ್ಷೇತ್ರದ ಬಡಾ ಎರ್ಮಾಳ್, ಕುಂದಾಪುರ ಕ್ಷೇತ್ರದ ಆನೆಗುಡ್ಡೆ, ಉಡುಪಿ ಕ್ಷೇತ್ರದ ಬ್ರಹ್ಮಾವರ ಮಹೇಶ್ ಆಸ್ಪತ್ರೆಯ ಬಳಿ ಹಾಗೂ ಅಂಬಾಗಿಲುವಿನಲ್ಲಿ ತಲಾ 1.08 ಕೋಟಿರೂ. ವೆಚ್ಚದಲ್ಲಿ ಸ್ಟೀಲ್ ಕಾಲು ಸೇತುವೆ ನಿರ್ಮಾಣವಾಗಲಿದೆ.

ಜನ ಸಂಚಾರ ಹೆಚ್ಚಿರುವ ಈ ಪ್ರದೇಶಗಳಲ್ಲಿ, ರಸ್ತೆಯನ್ನು ದಾಟಲು ಜನಸಾಮಾನ್ಯರಿಗೆ ಸಹಾಯಕವಾಗುವಂತೆ ಸ್ಟೀಲ್ ಪಾದಚಾರಿ ಕಾಲು ಸೇತುವೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯು ಪೂರ್ಣಗೊಂಡಿದ್ದು ಶೀಘ್ರದಲ್ಲಿಯೇ ಕೆಲಸ ಕಾರ್ಯಗಳು ಆರಂಭಗೊಳ್ಳಲಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News