ಜೂ.21ರಿಂದ 'ಬೀಡ್ಸ್' ನಿಂದ ಉಚಿತ NATA ತರಬೇತಿ
Update: 2021-06-20 19:35 IST
ಮಂಗಳೂರು : ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್ ಅಧೀನದ ಬ್ಯಾರೀಸ್ ಎನ್ವಿರೋ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ (BEADS) ಆರ್ಕಿಟೆಕ್ಚರ್ ಕಲಿಯ ಬಯಸುವ ವಿದ್ಯಾರ್ಥಿಗಳಿಗೆ ಉಚಿತ ನಾಟಾ (NATA) ಕ್ರ್ಯಾಶ್ ಕೋರ್ಸ್ ತರಬೇತಿ ನೀಡುತ್ತಿದೆ.
ಡ್ರಾಯಿಂಗ್, ರೀಸನಿಂಗ್ ಟೆಸ್ಟ್ , ಪಿಸಿಎಂ ಗಳನ್ನು ಒಳಗೊಂಡ ಈ ಆನ್ ಲೈನ್ ತರಬೇತಿ ಕ್ಲಾಸ್ ಗಳು ಜೂನ್ 21 ರಿಂದ ಜುಲೈ 10ರವರೆಗೆ ನಡೆಯಲಿದೆ.
ಆರ್ಕಿಟೆಕ್ಚರ್ ಕಲಿಯಲು ನಾಟಾ ಪರೀಕ್ಷೆ ತೇರ್ಗಡೆಯಾಗಿರುವುದು ಕಡ್ಡಾಯವಾಗಿದೆ. ವಿದ್ಯಾರ್ಥಿ ವೇತನಗಳನ್ನು ಪಡೆಯಲು ವಿದ್ಯಾರ್ಥಿಗಳು ಸಿಇಟಿ ( CET) ಯಲ್ಲೂ ಆಯ್ಕೆಯಾಗಬೇಕು. ನಾಟಾ ನೋಂದಾವಣೆ ಹಾಗೂ ಸಿಇಟಿ ಕೋಚಿಂಗ್ ಪಡೆಯಲು ಬ್ಯಾರೀಸ್ ಎನ್ವಿರೋ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ ನೆರವಾಗಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ನೋಂದಾವಣೆ ಮಾಡಿಕೊಳ್ಳಲು ಪ್ರಫುಲ್ಲ ಮೊ. 9900066888 ಅವರನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.