ಉಡುಪಿ ಜಿಲ್ಲೆ ಅನ್‌ಲಾಕ್ ಮಾಡಲು ರಘುಪತಿ ಭಟ್ ಒತ್ತಾಯ
Update: 2021-06-20 19:44 IST
ಉಡುಪಿ, ಜೂ.20: ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ಕಾರಣಕ್ಕೆ ಅನ್‌ಲಾಕ್ ಮಾಡಲು ನೀಡಿದ ಆದೇಶದ ಜಿಲ್ಲೆಗಳ ಪಟ್ಟಿಯಲ್ಲಿ ಉಡುಪಿಯನ್ನು ಕೂಡ ಸೇರಿಸಿ ಅನ್‌ಲಾಕ್ ಮಾಡಬೇಕೆಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಸರಕಾರವನ್ನು ಒತ್ತಾಯಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಕೊವೀಡ್ ಪರೀಕ್ಷೆ ನಡೆದಿದ್ದು, ಪ್ರಸ್ತುತ ದಿನಕ್ಕೆ 3000ಕ್ಕೂ ಅಧಿಕ ಕೋವಿಡ್ ಪರೀಕ್ಷೆ ನಡೆಯುತ್ತಿದೆ. ಅದರಲ್ಲಿ ಶೇ.5.05 ಪಾಸಿಟಿವಿಟಿ ದರ ಇರುವುದರಿಂದ ಉಡುಪಿ ಜಿಲ್ಲೆಯನ್ನು ಅನ್ಲಾಕ್ ಮಾಡ ಬಹುದು. ಇಲ್ಲವಾದರೆ ಎಲ್ಲಾ ವರ್ಗದ ಜನರಿಗೆ ಅನ್ಯಾಯ ಮಾಡಿದಂತಾ ಗುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಲಾಕ್‌ಡೌನ್‌ನಿಂದ ಸಣ್ಣ ಪುಟ್ಟ ವ್ಯಾಪಾರಸ್ಥರು ಸೇರಿದಂತೆ ಎಲ್ಲಾ ವರ್ಗದ ಜನ ಸಂಕಷ್ಟಕ್ಕೊಳಗಾಗಿ ರುವುದರಿಂದ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿ ಅನ್‌ಲಾಕ್ ಮಾಡುವುದು ಸೂಕ್ತ ಎಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.