ನಾಗರಿಕ ಸಮಿತಿಯಿಂದ 4 ಅಪರಿಚಿತ ಮೃತದೇಹಗಳ ಅಂತ್ಯಸಂಸ್ಕಾರ
Update: 2021-06-20 20:14 IST
ಉಡುಪಿ, ಜೂ.20: ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿಡಲಾಗಿದ್ದ ನಾಲ್ಕು ಅಪರಿಚಿತ ಶವಗಳ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಠೆ ದಫನ ಭೂವಿುಯಲ್ಲಿ ಶನಿವಾರ ನಡೆಸಲಾಯಿತು.
ಶವಗಳ ದಫನ ಕಾರ್ಯದಲ್ಲಿ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಸಮಾಜಸೇವಕ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ, ರಾಮ ದಾಸ್ ಪಾಲನ್, ಸಾಜಿ ಅಜ್ಜರಕಾಡು ಭಾಗಿಗಳಾದರು. ನಗರ ಠಾಣೆಯ ಪೊಲೀಸ್ ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ, ಮಣಿಪಾಲ ಠಾಣೆಯ ಸಿಬ್ಬಂದಿ ವಿಶ್ವಜಿತ್, ಆದರ್ಶ್ ಕಾನೂನು ಪ್ರಕ್ರಿಯೆ ನಡೆಸಿದರು. ನಾಗರಿಕ ಸಮಿತಿ ಈವರೆಗೆ ಒಟ್ಟು 151 ಅನಾಥ ಶವಗಳ ಅಂತ್ಯಸಂಸ್ಕಾರ ವನ್ನು ನೆರವೇರಿಸಿದೆ.