ಅಂಬಲಪಾಡಿ: ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಣೆ
Update: 2021-06-20 20:19 IST
ಉಡುಪಿ, ಜೂ.20: ಕೋವಿಡ್-19 ಹೆಲ್ಪ್ ಡೆಸ್ಕ್ ಅಂಬಲಪಾಡಿ ವತಿಯಿಂದ ಅಂಬಲಪಾಡಿ ನಗರ, ಅಂಬಲಪಾಡಿ ಗ್ರಾಮಾಂತರ, ಕಪ್ಪೆಟ್ಟು ಮತ್ತು ಮೂಡ ನಿಡಂಬೂರು ಪ್ರದೇಶದ ಆಶಾ ಕಾರ್ಯಕರ್ತೆಯರಿಗೆ ದಾನಿಗಳು ಕೊಡ ಮಾಡಿದ ಆಹಾರ ಧಾನ್ಯಗಳ ಕಿಟ್ಗಳನ್ನು ಅಂಬಲಪಾಡಿ ಯುವಕ ಮಂಡಲ ಕಚೇರಿಯಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ನಗರ ಆರಕ್ಷಕ ಠಾಣೆಯ ಸಹಾಯಕ ಉಪ ನಿರೀಕ್ಷಕ ಜಯಕರ್ ಐರೋಡಿ, ದಾನಿಗಳಾದ ಚಂದ್ರಶೇಖರ್ ಸುವರ್ಣ, ಶೈಲಜಾ ಚಂದ್ರಶೇಖರ್, ಯುವಕ ಮಂಡಲ ಅಧ್ಯಕ್ಷ ಹರೀಶ್ ಪಾಲನ್, ಗೌರವಾಧ್ಯಕ್ಷ ಕೀರ್ತಿ ಶೆಟ್ಟಿ, ಮಾಜಿ ಗೌರವಾಧ್ಯಕ್ಷ ಜಗದೀಶ್ ಕೆದ್ಲಾಯ, ಅಂಬಲಪಾಡಿ ಗ್ರಾಪಂ ಮಾಜಿ ಅಧ್ಯಕ್ಷ ಯೋಗೀಶ್ ಶೆಟ್ಟಿ, ಮಾಜಿ ಉಪಾಧ್ಯಕ್ಷ ಎ.ಶಿವಕುಮಾರ್, ಗ್ರಾಪಂ ಸದಸ್ಯ ರಾಜೇಶ್ ಸುವರ್ಣ, ಮಾಜಿ ಸದಸ್ಯ ಜಗದೀಶ್ ಆಚಾರ್ಯ, ಬುಡೋಕಾನ್ ಕರಾಟೆ ಅಂಡ್ ಸ್ಪೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷ ವಾಮನ್ ಪಾಲನ್ ಉಪಸ್ಥಿತರಿದ್ದರು.