ಪೊಲೀಸರ ಮುಂದೆ ಹಾಜರಾದ ಆಯಿಶಾ ಸುಲ್ತಾನಾ

Update: 2021-06-20 14:58 GMT

ಕೊಚ್ಚಿ: ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ವಿರುದ್ಧದ ಹೇಳಿಕೆಗೆ ದೇಶದ್ರೋಹ ಆರೋಪ ಎದುರಿಸುತ್ತಿರುವ ಚಲನಚಿತ್ರ ನಿರ್ಮಾಪಕಿ ಆಯಿಶಾ ಸುಲ್ತಾನಾ ರವಿವಾರ ಪೊಲೀಸರ ಮುಂದೆ ಹಾಜರಾದರು.

ಸುಲ್ತಾನಾ ತನ್ನ ವಕೀಲರೊಂದಿಗೆ ಸಂಜೆ 4.30 ರ ವೇಳೆಗೆ ಕವರಟ್ಟಿ ಪೊಲೀಸರ ಮುಂದೆ ಹಾಜರಾದರು.

ಲಕ್ಷದ್ವೀಪದ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಆಯಿಶಾರ ವಿಚಾರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಕೇರಳ ಹೈಕೋರ್ಟ್ ಕಳೆದ ವಾರ ಆಯಿಶಾರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿತ್ತು ಆದರೆ ಜೂನ್ 20 ರಂದು ಪೊಲೀಸರ ಮುಂದೆ ಹಾಜರಾಗುವಂತೆ ಸೂಚಿಸಿತ್ತು.

ಲಕ್ಷದ್ವೀಪದ ಬಿಜೆಪಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ನೀಡಿದ ದೂರಿನ ಮೇರೆಗೆ ಕವರಟ್ಟಿ ಪೊಲೀಸರು ಜೂನ್ 10 ರಂದು ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆಯಿಶಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News