ವಸತಿ ಗೃಹದಲ್ಲಿ ಮಲಗಿದ್ದಲ್ಲೇ ಮೃತ್ಯು
Update: 2021-06-20 20:41 IST
ಉಡುಪಿ, ಜೂ.20: ನಗರದ ಹಳೆ ಡಯಾನ ವೃತ್ತದ ಸಮೀಪದ ಖಾಸಗಿ ವಸತಿ ಗೃಹದಲ್ಲಿ ವ್ಯಕ್ತಿಯೊಬ್ಬರು ಮಲಗಿದ್ದಲ್ಲಿ ಮೃತಪಟ್ಟಿರುವುದು ರವಿವಾರ ಬೆಳಕಿಗೆ ಬಂದಿದೆ.
ಮೃತರನ್ನು ದೊಡ್ಡಣಗುಡ್ಡೆ ನೇಕಾರ ಕಾಲೋನಿಯ ಸಂದೀಪ್ ಶೆಟ್ಟಿಗಾರ್ (42) ಎಂದು ಗುರುತಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.