ವಿವಾಹಿತನೊಂದಿಗೆ ಯುವತಿ ನಾಪತ್ತೆ

Update: 2021-06-20 15:15 GMT

ಗಂಗೊಳ್ಳಿ, ಜೂ.20: ಯುವತಿಯೊರ್ವಳು ವಿವಾಹಿತೆನೊಂದಿಗೆ ನಾಪತ್ತೆ ಯಾಗಿರುವ ಘಟನೆ ಜೂ.7ರಂದು ಆಲೂರು ಗ್ರಾಮದ ಹಳ್ಳಿ ಹೆಬ್ಬಾಗಿಲು ನಡೆದಿದೆ.

ಆಲೂರು ಗ್ರಾಮದ ಹಳ್ಳಿ ಹೆಬ್ಬಾಗಿಲು ನಿವಾಸಿ ಶೇಷಿ ಎಂಬವರ ಮಗಳು ಅವಿವಾಹಿತೆ ವನಜ(29) ಹಾಗೂ ನೆರೆಮನೆಯ ವಿವಾಹಿತ ಚಂದ್ರ(42) ಎಂಬವರು ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದು, ಜೂ.7ರಂದು ಚಂದ್ರ ಪೇಟೆಗೆ ಹೋಗುವುದಾಗಿ ಹೇಳಿ ಹೋಗಿದ್ದು, ಅದೇ ದಿನ ಮಧ್ಯಾಹ್ನ ವನಜಾ ಸಹ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದರು. ಇಬ್ಬರೂ ಕೂಡ ಈವರೆಗೆ ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಚಂದ್ರ ಅವರ ಪತ್ನಿ ಬಾಬಿ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News