ಜೂ.21ರಂದು ಕೋವಿಡ್ ಲಸಿಕಾ ಮಹಾಮೇಳ; ಉಡುಪಿ ಜಿಲ್ಲೆಯಲ್ಲಿ 30,000 ಲಸಿಕೆ ನೀಡುವ ಗುರಿ

Update: 2021-06-20 15:19 GMT

ಉಡುಪಿ, ಜೂ.20: ಉಡುಪಿ ಜಿಲ್ಲೆಯಲ್ಲಿ ಜೂ.21ರಂದು ಕೋವಿಡ್-19 ಲಸಿಕಾಕರಣದ ಮಹಾಮೇಳ ಜರು ಗಲಿದ್ದು, ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 30,000 ಕೋವಿಡ್-19 ಲಸಿಕೆಯನ್ನು ನೀಡುವ ಗುರಿಯನ್ನು ಹೊಂದಲಾಗಿದೆ.

ಉಡುಪಿ ತಾಲೂಕಿನಲ್ಲಿ 10000, ಕುಂದಾಪುರ ತಾಲೂಕಿನಲ್ಲಿ 8000, ಕಾರ್ಕಳ ತಾಲೂಕಿನಲ್ಲಿ 3000 ಸೇರಿದಂತೆ ಒಟ್ಟು 30ಸಾವಿರ ಲಸಿಕೆ ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ರಾಜ್ಯ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರು/ದುರ್ಬಲ ಗುಂಪಿನ ಫಲಾನುಭವಿಗಳಿಗೆ/ಆದ್ಯತಾ ಗುಂಪಿನ ವರಿಗೆ ಮತ್ತು ಆರೋಗ್ಯ ಕಾರ್ಯಕರ್ತರುಗಳಿಗೆ/ಕೇಂದ್ರ ಸರಕಾರ ಗುರುತಿಸಿ ರುವ ಮುಂಚೂಣಿ ಕಾರ್ಯಕರ್ತರುಗಳಿಗೆ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಪ್ರಥಮ ಡೋಸ್ ಮತ್ತು 2ನೆ ಡೋಸ್ ನೀಡಲಾಗುವುದು.

ನಿಟ್ಟೂರು ಹನುಮಂತನಗರದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ 10.30ಕ್ಕೆ ನಡೆಯುವ ಜಿಲ್ಲಾ ಮಟ್ಟದ ಕೋವಿಡ್ ಲಸಿಕಾಕರಣದ ಮಹಾಮೇಳದವನ್ನು ಜಿಲ್ಲಾಧಿಾರಿ ಜಿ.ಜಗದೀಶ್ ಉದ್ಘಾಟಿಸ ಲಿರುವರು.

ನಗರ ಪ್ರದೇಶದ ವಿವರ: ಅಜ್ಜರಕಾಡು ಜಿಲ್ಲಾಸ್ಪತ್ರೆ(ಸೇಂಟ್ ಸಿಸಿಲಿ ಶಾಲೆ) ಯಲ್ಲಿ ಬೆಳಗ್ಗೆ 9.30ರಿಂದ 4.30ರ ವರೆಗೆ ಕೋವಿಶೀಲ್ಡ್ 150, ಕೋವ್ಯಾಕ್ಸಿನ್ 100, ದೊಡ್ಡಣಗುಡ್ಡೆ ಜನತಾ ವ್ಯಾಯಾಮ ಶಾಲೆಯಲ್ಲಿ ಬೆಳಿಗ್ಗೆ 10ರಿಂದ 4.30ರ ವರೆಗೆ ಕೋವಿಶೀಲ್ಡ್ 550 ಡೋಸ್‌ಗಳು ಲಭ್ಯ ಇವೆ.

ಬೆಳಿಗ್ಗೆ 9.30ರಿಂದ 4.30ರವರೆಗೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮಣಿಪಾಲ(ಮಾಧವ ಕೃಪಾ ಶಾಲೆ, ಮಣಿಪಾಲ)ದಲ್ಲಿ ಕೋವಿಶೀಲ್ಡ್ 300, ಕೋವ್ಯಾಕ್ಸಿನ್ 450, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉಡುಪಿ(ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹನುಮಂತನಗರ)ದಲ್ಲಿ ಕೋವಿಶೀಲ್ಡ್ 300, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಉಡುಪಿ(ಖಾಸಗಿ ಪ್ರಾಥಮಿಕ ಶಾಲೆ ಆದಿಉಡುಪಿ)ಯಲ್ಲಿ ಕೋವ್ಯಾಕ್ಸಿನ್ -200, ಎಫ್‌ಪಿಎಐ ಕುಕ್ಕಿಕಟ್ಟೆಯಲ್ಲಿ (ಇಂದಿರಾನಗರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಇಂದಿರಾನಗರ) ಕೋವಿಶೀಲ್ಡ್ 150, ಕೋವ್ಯಾಕ್ಸಿನ್ -30, ಸರಕಾರಿ ತಾಯಿ ಮತ್ತು ಮಕ್ಕಳ (ಬಿ.ಆರ್.ಎಸ್) ಆಸ್ಪತ್ರೆ ಉಡುಪಿಯಲ್ಲಿ ಕೋವಿಶೀಲ್ಡ್-350ಡೋಸ್‌ಗಳು ಲಭ್ಯ ಇವೆ.

ವಿದೇಶ ಪ್ರಯಾಣಿಯಕರಿಗೆ: ಜೂ.25ರ ಒಳಗೆ ವಿದೇಶ ಪ್ರಯಾಣ ಮಾಡುವವರಲ್ಲಿ ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 28 ದಿನಗಳು ಮೀರಿದವರಿಗೆ 2ನೇ ಡೋಸ್ ಕೋವಿಶೀಲ್ಡ್ ಲಸಿಕೆ 100 ಡೋಸ್ ಲಭ್ಯ ಇವೆ.

ಗ್ರಾಮೀಣ ಪ್ರದೇಶದಲ್ಲಿ ರಾಜ್ಯ ಸರಕಾರ ಗುರುತಿಸಿರುವ ಅನುಬಂಧ-1 ರಲ್ಲಿರುವ ಕೊರೋನ ಮುಂಚೂಣಿ ಕಾರ್ಯಕರ್ತರು/ದುರ್ಬಲ ಗುಂಪಿನ ಫಲಾನುಭವಿಗಳು/ಆದ್ಯತಾಗುಂಪಿನವರು ಮತ್ತು ಆರೋಗ್ಯ ಕಾರ್ಯಕರ್ತರು/ಕೇಂದ್ರ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರು ಹಾಗೂ 45 ವರ್ಷ ಮೇಲ್ಪಟ್ಟ ಸಾರ್ವಜನಿಕರು ಕೋವಿಡ್-19 ಪ್ರಥಮ ಡೋಸ್ ಮತ್ತು 2ನೇ ಡೋಸ್ ಲಸಿಕೆಯನ್ನು ಪಡೆಯಲು ಹತ್ತಿರದ ಸರಕಾರಿ ಆಸ್ಪತ್ರೆ/ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಲಸಿಕ ಶಿಬಿರದ ಸ್ಥಳವನ್ನು ಖಚಿತಪಡಿಸಿ ಕೊಂಡು ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯಬಹುದು. ಜಿಲ್ಲೆಯಲ್ಲಿ 18 ರಿಂದ 44ವರ್ಷ ವಯೋಮಿತಿಯ ಸಾರ್ವಜನಿಕರಿಗೆ ಯಾವುದೇ ಕೋವಿಡ್- 19 ಲಸಿಕೆ ಲ್ಯವಿರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News