ದ.ಕ. ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್‌ಗೆ 1 ಬಲಿ; 1 ಪ್ರಕರಣ ಪತ್ತೆ

Update: 2021-06-20 15:51 GMT

ಮಂಗಳೂರು, ಜೂ. 20: ದ.ಕ. ಜಿಲ್ಲೆಯಲ್ಲಿ ರವಿವಾರ ಬ್ಲ್ಯಾಕ್ ಫಂಗಸ್‌ ಗೆ 1 ಬಲಿಯಾಗಿದೆ ಮತ್ತು 1 ಪ್ರಕರಣ ಪತ್ತೆಯಾಗಿವೆ. ರವಿವಾರ ಪತ್ತೆಯಾದ ಪ್ರಕರಣವು ಚಿತ್ರದುರ್ಗ ಜಿಲ್ಲೆಗೆ ಮತ್ತು ಬಲಿಯಾದ ವ್ಯಕ್ತಿಯು ದ.ಕ.ಜಿಲ್ಲೆಗೆ ಸಂಬಂಧಿಸಿದ್ದಾಗಿದೆ.

ದ.ಕ.ಜಿಲ್ಲೆಯಲ್ಲಿ ಸದ್ಯ 37 ಬ್ಲ್ಯಾಕ್ ಫಂಗಸ್‌ ಸಕ್ರಿಯ ಪ್ರಕರಣಗಳು ಇದೆ. ಇದರಲ್ಲಿ ದ.ಕ.ಜಿಲ್ಲೆಯ 9 ಮತ್ತು ಹೊರ ಜಿಲ್ಲೆಯ 28 ಪ್ರಕರಣಗಳು ಸೇರಿವೆ.

ರವಿವಾರ ಚಿಕಿತ್ಸೆ ಪಡೆದು ಗುಣಮುಖರಾದ ಇಬ್ಬರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದರೊಂದಿಗೆ ಈವರೆಗೆ ಗುಣಮುಖರಾಗಿ ಮನೆಗೆ ಮರಳಿದವರ ಸಂಖ್ಯೆ 28ಕ್ಕೇರಿದೆ. ಇದರಲ್ಲಿ ದ.ಕ.ಜಿಲ್ಲೆಯ 5 ಮತ್ತು ಹೊರ ಜಿಲ್ಲೆಯ 23 ಮಂದಿ ಸೇರಿದ್ದಾರೆ.

ದ.ಕ.ಜಿಲ್ಲೆಯಲ್ಲಿ ಈವರೆಗೆ ಬ್ಲ್ಯಾಕ್ ಫಂಗಸ್‌ ಗೆ 17 ಮಂದಿ ಬಲಿಯಾಗಿದ್ದಾರೆ. ಅದರಲ್ಲಿ ದ.ಕ.ಜಿಲ್ಲೆಯ ಮೂವರು ಮತ್ತು ಹೊರ ಜಿಲ್ಲೆಯ 14 ಮಂದಿ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News