ಜೂ.21 ರಿಂದ ಅಂಚೆ ಕಚೇರಿಗಳ ಸೇವೆಗಳು ಯಥಾಸ್ಥಿತಿಗೆ

Update: 2021-06-20 16:27 GMT

ಮಂಗಳೂರು, ಜೂ. 20: ರಾಜ್ಯ ಸರ್ಕಾರದ‌ ಅನ್ ಲಾಕ್ ಗೈಡ್ಲೈನ್ ನಂತೆ,‌ ಮಂಗಳೂರು ಅಂಚೆ‌ ವಿಭಾಗದ ಎಲ್ಲಾ‌ ಅಂಚೆ ಕಚೇರಿಗಳು‌ ಜೂನ್ 21 ರಿಂದ ಲಾಕ್ಡೌನ್ ನ‌ ಮೊದಲಿದ್ದಂತೆ ಸಹಜ ವ್ಯವಹಾರ ಸಮಯ ದೊಂದಿಗೆ ಕಾರ್ಯನಿರ್ವಹಿಸಲಿವೆ ಹಾಗೂ ತೆರೆದಿರಲಿವೆ.

ಇಲಾಖಾ ಅಂಚೆ ಕಚೇರಿಗಳು ಸಂಜೆ 5ರ ತನಕ ತೆರೆದಿರಲಿದ್ದು  ವ್ಯವಹಾರ ಸಮಯ 9ರಿಂದ 2 ರ ತನಕ ಹಾಗೂ ಶಾಖಾ ಅಂಚೆ ಕಚೇರಿಗಳು 9ರಿಂದ 2ರವರೆಗೆ ಸೇವೆ ನೀಡಲಿವೆ. ಸಾರ್ವಜನಿಕರು‌ ಗಮನಿಸಬೇಕಾಗಿ‌ ಕೋರಿದೆ. ಲಾಕ್ ಡೌನ್ ಸಮಯದಲ್ಲಿ ,ಅಂದರೆ ನಿನ್ನೆಯ ವರೆಗೆ  ಅಂಚೆ ಕಚೇರಿಗಳು ಕೇವಲ ಮಧ್ಯಾಹ್ನ 12ರವರೆಗೆ ಮಾತ್ರ ವ್ಯವಹಾರ ನಡೆಸುತ್ತಿದ್ದವು ಎಂದು ಮಂಗಳೂರು ಅಂಚೆ ವಿಭಾಗದ  ಹಿರಿಯ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News