ಮೂಳೂರಿನಲ್ಲಿ ಕಡಲ್ಕೊರೆತ

Update: 2021-06-20 16:29 GMT

ಕಾಪು : ಕೆಲವು ದಿನಗಳಿಂದ  ಸುರಿಯುತ್ತಿರುವ ಮಳೆಯಿಂದ ಕಾಪು ಪುರಸಭಾ ವ್ಯಾಪ್ತಿಯ ಮೂಳೂರಿನ ತೊಟ್ಟಂ ಸಮೀಪದಲ್ಲಿ ಕಡಲ್ಕೊರೆತ ಉಂಟಾಗಿದ್ದು, ಹಲವು ತೆಂಗಿನ ಮರಗಳು ಸಮುದ್ರ ಸೇರಿವೆ.

ಸುಮಾರು 2 ಕಿಲೋಮೀಟರ್ ಉದ್ದದಲ್ಲಿ ಜನ ವಸತಿ ಪ್ರದೇಶದಲ್ಲಿ ಕಡಲ್ಕೊರೆತವಾಗುತ್ತಿದ್ದು,  ಈ ಭಾಗದಲ್ಲಿದ್ದ ಹತ್ತಾರು ತೆಂಗಿನ ಮರಗಳು ಕಡಲ ಒಡಲು ಸೇರಿವೆ. ತುರ್ತು ತಡೆಗೋಡೆ ನಿರ್ಮಿಸುವಂತೆ ಸ್ಥಳಿಯರು ಆಗ್ರಹಿಸಿದರು.

ಪಡುಬಿದ್ರಿಯ ನಡಿಪಟ್ಣ, ಕಾಡಿಪಟ್ಣ, ಕಾಪುವಿನ ಕೈಪುಂಜಾಲು, ಬೀಚ್ ಪ್ರದೇಶ, ಹೆಜಮಾಡಿಯ ಕೋಡಿ, ಎರ್ಮಾಳು ತೆಂಕ, ಬಡಾ ಉಚ್ಚಿದಲ್ಲೂ ಕಡಲ ಅಬ್ಬರ ಹೆಚ್ಚಾಗಿದ್ದು, ಈ ಭಾಗದಲ್ಲೂ ಕಡಲ್ಕೊರೆತ ಭೀತಿ ಉಂಟಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News