ದ.ಕ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆಯೊಂದಿಗೆ ವಾರಂತ್ಯದ ಕರ್ಫ್ಯೂ ಅನಿವಾರ್ಯ: ಕೋಟ

Update: 2021-06-21 05:05 GMT

ಮಂಗಳೂರು, ಜೂ.20: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಗತ್ಯ ಸಾಮಗ್ರಿಗಳ ಅಂಗಡಿಗಳಲ್ಲಿ ಮಾರಾಟ ಖರೀದಿ ಆಟೋ, ಟ್ಯಾಕ್ಸಿ ಓಡಾಟ, ಕೃಷಿ, ಮೀನುಗಾರಿಕ ಅವಕಾಶ ಕಲ್ಪಿಸಿ ಬೆ.7ರಿಂದ ಅಪರಾಹ್ನ 1 ಗಂಟೆಯವರೆಗೆ ವಿನಾಯಿತಿ ನೀಡಲಾಗಿದೆ. ವಾರಂತ್ಯದ ಕರ್ಫ್ಯೂ ಜಿಲ್ಲೆಯಲ್ಲಿಯೂ ಇರುತ್ತದೆ ಎಂದು ಸಚಿವ ಶ್ರೀನಿವಾಸ ಪೂಜಾರಿ ಸುದ್ದಿಗಾರರಿಗಿಂದು ತಿಳಿಸಿದ್ದಾರೆ.

ಜನರ ಕಷ್ಟದ ಬಗ್ಗೆ ನನಗೆ ಅರಿವಿದೆ. ಇನ್ನೂ ಕೆಲವು ದಿನಗಳಲ್ಲಿ ಇದೇ ರೀತಿ ಕೊರೋನ ಇಳಿಮುಖವಾದರೆ  2 ರಿಂದ 3 ಶೇಕಡಾ ಸೋಂಕಿತರು ಕಂಡು ಬರಬಹುದು. ಆಗ ಲಾಕ್ ಡೌನ್ ಸಂಪೂರ್ಣ ಮುಕ್ತ ವಾಗಬಹುದು. ಬಟ್ಟೆ ಅಂಗಡಿಗಳಿಗೂ ಅವಕಾಶ ದೊರೆಯಬಹುದು. ಅದರೆ ಸದ್ಯ ಸೋಂಕಿನ  ಪ್ರಮಾಣ ಇನ್ನಷ್ಟು ಇಳಿಸಬೇಕೆನ್ನುವ ಗುರಿಯೊಂದಿಗೆ ವಿನಾಯಿತಿಯೊಂದಿಗೆ ಲಾಕ್ ಡೌನ್ ಅನಿವಾರ್ಯ ವಾಗಿದೆ ಎಂದು ಕೋಟಾ ಶ್ರೀ ನಿವಾಸ ಪೂಜಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News