ಜೂ. 21ರಂದು ಭಟ್ಕಳ ತಾಲೂಕಿನಲ್ಲಿ 2500 ಲಸಿಕೆ : ಡಾ.ಮೂರ್ತಿರಾಜ್ ಭಟ್

Update: 2021-06-20 16:36 GMT

ಭಟ್ಕಳ : ಜೂನ್ 21ರ ಸೋಮವಾರ ಭಟ್ಕಳ ತಾಲ್ಲೂಕಿಗೆ ಜಿಲ್ಲಾ ಆಡಳಿತದಿಂದ ಸುಮಾರು 2500 ಕೋವಿಶೀಲ್ಡ್ ಡೋಸ್‍ಗಳನ್ನು ನೀಡಲಾಗುತ್ತಿದ್ದು ತಂಝೀಮ್ ಮತ್ತು ರಾಬಿತಾ ಹಾಲ್ ನಲ್ಲಿ ನಡೆಯುವ ಲಸಿಕೆ ಕಾರ್ಯಕ್ರಮಕ್ಕೆ ಪ್ರತಿ ಕೇಂದ್ರಕ್ಕೆ 200ರಂತೆ 400 ಡೋಸ್ ಲಸಿಕೆ ನೀಡಲಾಗುವುದು ಎಂದು ಭಟ್ಕಳ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ಮೂರ್ತಿರಾಜ್ ಭಟ್ ಹೇಳಿದ್ದಾರೆ.

ಅವರು ಈ ಕುರಿತು ರವಿವಾರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿ, ಮಾತನಾಡಿದರು.  

ರಾಬಿತಾ ಹಾಲ್ ಮತ್ತು ತಂಝೀಮ್ ಹಾಲ್ ಜೊತೆಗೆ ಇತರ ಖಾಸಗಿ ಹಾಲ್‍ಗಳು, ದೇವಾಲಯಗಳು, ಮಂಟಪಗಳು ಮತ್ತು ಪಂಚಾಯತ್ ಹಾಲ್‍ಗಳು ಸೇರಿದಂತೆ ತಾಲೂಕಿನ 18 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಭಟ್ಕಳದಲ್ಲಿ ಸೋಮವಾರ ನಡೆಯಲಿರುವ ವ್ಯಾಕ್ಸಿನೇಷನ್ ಶಿಬಿರಕ್ಕೆ 400 ಡೋಸ್‍ಗಳನ್ನು ನೀಡಲಾಗುತ್ತಿದೆ ರಾಬಿತಾ ಹಾಲ್‍ಗೆ 200 ಡೋಸ್ ಮತ್ತು ತಂಜೀಮ್ ಹಾಲ್‍ಗೆ 200 ಡೋಸ್ ಇರುತ್ತದೆ. ಈ ಶಿಬಿರವು 45 ವರ್ಷ ಮತ್ತು ಮೇಲ್ಪಟ್ಟವರಿಗೆ ಆಗಿದೆ, ಆದಾಗ್ಯೂ 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಎನ್‍ಆರ್‍ಐಗಳು ಸಹ ಈ ಎರಡು ಕೇಂದ್ರಗಳನ್ನು ತಲುಪಿ ತಮ್ಮ ಪಾಸ್ ಪೋರ್ಟ್ ಮತ್ತು ವೀಸಾವನ್ನು ತೋರಿಸಿ ಮೊದಲ ಡೋಸ್ ಲಸಿಕೆ ಪಡೆಯಬಹುದಾಗಿದೆ ಎಂದಿರುವ ಅವರು,  ಮುರ್ಡೇಶ್ವರ, ಮಾವಳ್ಳಿ, ಬೈಲೂರು, ಮುಂಡಳ್ಳಿ , ಮಾರುಕೆರಿ, ತಾಲೂಕು ಆಸ್ಪತ್ರೆ ಸೇರಿದಂತೆ ವಿವಿಧ ಪಟ್ಟಣಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಜನರು ತಮ್ಮ ಪ್ರದೇಶದ ಹತ್ತಿರದ ಕೇಂದ್ರಗಳಿಗೆ ಭೇಟಿ ನೀಡಿ ಲಸಿಕೆ ಪಡೆಯಬಹುದು ಎಂದು ಡಾ.ಮೂರ್ತಿ ರಾಜ್ ಭಟ್ ಹೇಳಿದರು.

ಸಾರ್ವಜನಿಕರು ಪ್ರಯೋಜನೆ ಪಡೆಯುವಂತೆ ತಂಝೀಮ್ ಮನವಿ: ಜನರ ಅನುಕೂಲಕ್ಕಾಗಿ, ಸಾಮಾಜಿಕ ಸಂಸ್ಥೆ ಮಜ್ಲಿಸ್-ಎ-ಇಸ್ಲಾ-ಒ-ತಂಝೀಮ್ ನೇತೃತ್ವದ ಭಟ್ಕಳ ತಾಲ್ಲೂಕು ಆಡಳಿತವು ರಾಬಿತಾ ಹಾಲ್ ಮತ್ತು ಸಿದ್ದೀಕ್ ಸ್ಟ್ರೀಟ್‍ನ ತಂಝೀಮ್ ಹಾಲ್‍ನಲ್ಲಿ ಕರೋನ ಲಸಿಕೆ ಹಾಕಲು ವ್ಯವಸ್ಥೆ ಮಾಡಿದೆ. 45 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು. ಜನರು ಈ ಕೇಂದ್ರಗಳಲ್ಲಿ ಕರೋನದ ಮೊದಲ ಲಸಿಕೆ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಲಸಿಕೆ ಶಿಬಿರವನ್ನು ಸೋಮವಾರ ಬೆಳಗ್ಗೆ 9 ರಿಂದ ಸಂಜೆ 4.30 ರವರೆಗೆ ಎರಡೂ ಕೇಂದ್ರಗಳಲ್ಲಿ ನಡೆಸಲಾಗುವುದು ಎಂದು ತಂಝೀಮ್ ಮಾಧ್ಯಮ ಸಂಯೋಜಕ ಡಾ. ಹನೀಫ್ ಶಬಾಬ್ ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಏಕಕಾಲದಲ್ಲಿ ಎರಡು ಸ್ಥಳಗಳಲ್ಲಿ ನಡೆಸುತ್ತಿರುವ ಶಿಬಿರದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವಂತೆ ತಂಝೀಮ್ ಸಂಸ್ಥೆ ಸಾರ್ವಜನಿಕರಲ್ಲಿ  ಮನವಿ ಮಾಡಿಕೊಂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News