ಜರ್ಮನಿ: ರಶ್ಯಕ್ಕಾಗಿ ಬೇಹುಗಾರಿಕೆ ಮಾಡಿದ ವಿಜ್ಞಾನಿ ಬಂಧನ

Update: 2021-06-21 17:22 GMT

ಬರ್ಲಿನ್ (ಜರ್ಮನಿ), ಜೂ. 21: ಹಣಕ್ಕಾಗಿ ಜರ್ಮನಿಯ ವಿಶ್ವವಿದ್ಯಾನಿಲಯವೊಂದರಿಂದ ಸೂಕ್ಷ್ಮ ಮಾಹಿತಿಯೊಂದನ್ನು ರಶ್ಯ ಸರಕಾರಕ್ಕೆ ರವಾನಿಸಿದ ಆರೋಪದಲ್ಲಿ ರಶ್ಯದ ವಿಜ್ಞಾನಿಯೊಬ್ಬರನ್ನು ಬಂಧಿಸಿರುವುದಾಗಿ ಜರ್ಮನಿಯ ಫೆಡರಲ್ ಪ್ರಾಸಿಕ್ಯೂಟರ್‌ಗಳು ಸೋಮವಾರ ಹೇಳಿದ್ದಾರೆ.

ಆರೋಪಿಯನ್ನು ಇಲ್ನರ್ ಎನ್. ಎಂಬುದಾಗಿ ಗುರುತಿಸಲಾಗಿದೆ. 2020 ಅಕ್ಟೋಬರ್‌ನಿಂದ ರಶ್ಯದ ಗುಪ್ತಚರ ಸಂಸ್ಥೆಯೊಂದಕ್ಕಾಗಿ ಕೆಲಸ ಮಾಡುತ್ತಿದ್ದ ಆರೋಪದ ಮೇಲೆ ರಶ್ಯದ ವಿಜ್ಞಾನಿಯನ್ನು ಶುಕ್ರವಾರ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪ್ರಾಸಿಕ್ಯೂಟರ್‌ಗಳು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ರಶ್ಯ ವಿಜ್ಞಾನಿಯು ಜರ್ಮನಿ ವಿಶ್ವವಿದ್ಯಾನಿಲಯದ ಸಹಜ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಲ್ಲಿ ಸಂಶೋಧನಾ ಸಹಾಯಕನಾಗಿ ಕೆಲಸ ಮಾಡುತ್ತಿದ್ದನು ಎಂದು ಫೆಡರಲ್ ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News