ಕೇಂದ್ರ ಸಂಪುಟದಲ್ಲಿ ನಿತೀಶ್ ಕುಮಾರ್ ಪಕ್ಷದ ಸಂಸದರಿಗೆ ಸ್ಥಾನ?

Update: 2021-06-22 06:10 GMT

ಪಾಟ್ನಾ: ಪ್ರಸ್ತಾವಿತ ಕೇಂದ್ರ ಸಂಪುಟ ವಿಸ್ತರಣೆಯು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ( ಎನ್ ಡಿಎ)ಮೈತ್ರಿ ಪಕ್ಷದ ನಾಯಕರಿಗೆ ಅವಕಾಶ ಕಲ್ಪಿಸುತ್ತದೆ ಎಂದು ಬಿಹಾರದ ಆಡಳಿತಾರೂಢ ಸಂಯುಕ್ತ ಜನತಾದಳ(ಜೆಡಿಯು)ವಿಶ್ವಾಸ ಹೊಂದಿದೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷವು ಲೋಕಸಭೆಯಲ್ಲಿ 16 ಸದಸ್ಯರುಗಳನ್ನು ಹೊಂದಿದೆ.

“ಜೆಡಿಯು ಪಕ್ಷವು ಕೇಂದ್ರ ಹಾಗೂ ರಾಜ್ಯದಲ್ಲಿ ಎನ್‌ಡಿಎಯ ಒಂದು ಭಾಗವಾಗಿದೆ. ಹೀಗಾಗಿ ಜೆಡಿ-ಯು ಕೇಂದ್ರ ಸಚಿವ ಸಂಪುಟದಲ್ಲಿರುವುದು ಸಹಜ. ನಾವು ಅದಕ್ಕೆ ಸಿದ್ಧರಿದ್ದೇವೆ ”ಎಂದು ಜೆಡಿ-ಯು ರಾಷ್ಟ್ರೀಯ ಅಧ್ಯಕ್ಷ ಆರ್‌ಸಿಪಿ ಸಿಂಗ್ ಸೋಮವಾರ ಹೇಳಿದ್ದಾರೆ.

"ಜೆಡಿ-ಯು ಕೋಟಾದಿಂದ ಯಾರಿಗೆ ಸ್ಥಾನ ಸಿಗಲಿದೆ ಎಂದು ನಿರ್ಧರಿಸುವುದು ನಿತೀಶ್ ಕುಮಾರ್ ಅವರಿಗೆ ಬಿಟ್ಟ ವಿಚಾರವಾಗಿದೆ. ಕೇಂದ್ರ ಸಚಿವ ಸಂಪುಟಕ್ಕೆ ಸೇರಲು ಅಂತಹ ಯಾವುದೇ ಸೂತ್ರಗಳಿಲ್ಲ’’ ಎಂದು ಸಿಂಗ್ ಹೇಳಿದರು.

ಏತನ್ಮಧ್ಯೆ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂಗಳವಾರ ದಿಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ. ನಿತೀಶ್ ಅವರು ಬಿಜೆಪಿಯ ಹಿರಿಯ ಮುಖಂಡರನ್ನು ಭೇಟಿಯಾಗಬಹುದು ಹಾಗೂ ಮುಂದಿನ ಕ್ಯಾಬಿನೆಟ್ ವಿಸ್ತರಣೆಯ  ಕುರಿತಾಗಿ  ಔಪಚಾರಿಕ ಚರ್ಚೆಯನ್ನು ಮಾಡಬಹುದು ಎಂಬ ಊಹಾಪೋಹ ಕೇಳಿಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News