ಕಾಪು ತಾಲೂಕು ಸಹಜಸ್ಥಿತಿಗೆ; ಪಡುಬಿದ್ರೆ ಶಾಲಾ ಮೈದಾನದಲ್ಲಿ ಸಂತೆ

Update: 2021-06-22 08:01 GMT

ಕಾಪು : ಉಡುಪಿ ಜಿಲ್ಲೆ ಮಂಗಳವಾರದಿಂದ ಅನ್‌ಲಾಕ್‌ಗೊಂಡಿರುವ ಕಾಪು ತಾಲ್ಲೂಕಿನಲ್ಲಿ ಜನಜೀವನ ಸಹಜಸ್ಥಿತಿಗೆ ಮರಳಿದೆ.

ಮಂಗಳವಾರದಿಂದ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಸಂಜೆ 5ರವರೆಗೆ ತೆರೆಯಲು ಅವಕಾಶ ನೀಡಿರುವುದ ರಿಂದ ಮಂಗಳವಾರ ಪೇಟೆಯಲ್ಲಿ ಜನಸಂದಣಿ ಕಂಡುಬಂತು. ಪಡುಬಿದ್ರಿಯಲ್ಲಿ ನಡೆಯುವ ವಾರದ ಸಂತೆಯನ್ನು ಬೋರ್ಡು ಶಾಲೆಗೆ ಸ್ಥಳಾಂತರಿಸಲಾಗಿದ್ದು, ಸಂತೆಯಲ್ಲಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಜನ ಮುಗಿಬಿದ್ದರು.

ಕಾಪು, ಶಿರ್ವ, ಕಟಪಾಡಿ, ಮುದರಂಗಡಿ, ಫಲಿಮಾರು, ಹೆಜಮಾಡಿ, ಪಡುಬಿದ್ರಿ ಪೇಟೆಯಲ್ಲೂ ಜನಸಂದಣಿ ಕಂಡುಬಂತು. ಗ್ರಾಮೀಣ ಭಾಗದಲ್ಲೂ ಜನರ ಓಡಾಟವೂ ಮಾಮೂಲಿನಂತೆ ಇತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News