ಪಾಕಿಸ್ತಾನದ ಬ್ಯಾಟಿಂಗ್ ಕೋಚ್ ಹುದ್ದೆ ತ್ಯಜಿಸಿದ ಯೂನಿಸ್ ಖಾನ್

Update: 2021-06-22 08:20 GMT
photo: Indian express

ಕರಾಚಿ: ಅಚ್ಚರಿಯ ನಿರ್ಧಾರವೊಂದರಲ್ಲಿ ಮಾಜಿ ನಾಯಕ ಯೂನಿಸ್ ಖಾನ್ ಮಂಗಳವಾರ ಪಾಕಿಸ್ತಾನದ ಬ್ಯಾಟಿಂಗ್ ತರಬೇತುದಾರ ಸ್ಥಾನದಿಂದ ಕೆಳಗಿಳಿದರು.

ಯೂನಿಸ್ ಯಾವುದೇ ಕಾರಣಗಳನ್ನು ಸ್ಪಷ್ಟಪಡಿಸದಿದ್ದರೂ "ಇಷ್ಟವಿಲ್ಲದೆ, ಆದರೆ ಸೌಹಾರ್ದಯುತವಾಗಿ" ಅವರ ನಿರ್ಧಾರವನ್ನು ಒಪ್ಪಿಕೊಳ್ಳಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ.

ಪಾಕಿಸ್ತಾನ ತಂಡ ಜೂನ್ 25 ರಿಂದ ಜುಲೈ 20 ರವರೆಗೆ ಮೂರು ಏಕದಿನ ಹಾಗೂ  ಮೂರು ಟ್ವೆಂಟಿ- 20 ಪಂದ್ಯಗಳಿಗಾಗಿ ಇಂಗ್ಲೆಂಡ್ ಗೆ  ಪ್ರವಾಸವನ್ನು ಆರಂಭಿಸಲಿದೆ. ಐದು ಟ್ವೆಂಟಿ-20 ಹಾಗೂ  ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾಗವಹಿಸಲು ಪಾಕ್ ತಂಡವು ಜುಲೈ 21 ರಿಂದ ಆಗಸ್ಟ್ 24 ರವರೆಗೆ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಲಿದೆ.

"ಪಾಕಿಸ್ತಾನ ಪುರುಷರ ರಾಷ್ಟ್ರೀಯ ಕ್ರಿಕೆಟ್ ತಂಡವು ಬ್ಯಾಟಿಂಗ್ ತರಬೇತುದಾರರಿಲ್ಲದೆ ಇಂಗ್ಲೆಂಡ್ ಗೆ ಪ್ರಯಾಣಿಸಲಿದೆ. ಆದರೆ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಮೊದಲು ಯೂನಿಸ್ ಖಾನ್ ಅವರಿಂದ ತೆರವಾದ ಸ್ಥಾನಕ್ಕೆ ನೇಮಕ ಮಾಡುವ ನಿರ್ಧಾರವನ್ನು ಸರಿಯಾದ ಸಮಯದಲ್ಲಿ ಮಾಡಲಾಗುವುದು" ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಹೇಳಿಕೆಯಲ್ಲಿ ತಿಳಿಸಿದೆ.

2022ರ ಐಸಿಸಿ ಟಿ- 20 ವಿಶ್ವಕಪ್ ತನಕ ಎರಡು ವರ್ಷಗಳ ಒಪ್ಪಂದದ ಮೇರೆಗೆ ಯೂನಿಸ್ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News