ಭಾರತ-ನ್ಯೂಝಿಲ್ಯಾಂಡ್ 5ನೇ ದಿನದಾಟದ ಆರಂಭಕ್ಕೆ ಮಳೆ ಅಡ್ಡಿ

Update: 2021-06-22 10:54 GMT
photo: twitter

ಸೌತಾಂಪ್ಟನ್: ಭಾರತ ಹಾಗೂ ನ್ಯೂಝಿಲ್ಯಾಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯದ 4ನೇ ದಿನದಾಟವು ಒಂದೂ ಎಸೆತ ಕಾಣದೇ ಸೋಮವಾರ ರದ್ದಾಗಿತ್ತು. ಐದನೇ ದಿನದಾಟವಾದ ಮಂಗಳವಾರದ ಪಂದ್ಯದ ಆರಂಭಕ್ಕೆ ಮಳೆ ಮತ್ತೆ ಅಡ್ಡಿಯಾಗಿದೆ.

ಮಳೆ ಸುರಿಯತ್ತಿರುವ ಕಾರಣ ಪಿಚ್ ಮೇಲೆ ಹೊದಿಕೆ ಹಾಸಲಾಗಿದೆ. ಹೀಗಾಗಿ 5ನೇ ದಿನದಾಟದ ಆರಂಭ ವಿಳಂಬವಾಗಿದೆ ಎಂದು ಬಿಸಿಸಿಐ ದೃಢಪಡಿಸಿದೆ.

ಮಳೆಯಿಂದಾಗಿ ಫೈನಲ್ ಪಂದ್ಯದ ಎರಡು ದಿನಗಳು ಮಳೆಗಾಹುತಿಯಾಗಿರುವ ಹಿನ್ನೆಲೆಯಲ್ಲಿ ಮೀಸಲು ದಿನವನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ.

3ನೇ ದಿನದಾಟದಂತ್ಯಕ್ಕೆ ನ್ಯೂಝಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಹಿರಿಯ ಬ್ಯಾಟ್ಸ್ ಮನ್ ರಾಸ್ ಟೇಲರ್ ಕ್ರೀಸ್ ನಲ್ಲಿದ್ದರು. ಭಾರತವು 3ನೇ ದಿನದಾಟ ದಂತ್ಯಕ್ಕೆ 2 ವಿಕೆಟನ್ನು ಉರುಳಿಸಿತ್ತು.

ಭಾರತವು ನ್ಯೂಝಿಲ್ಯಾಂಡ್ ನ್ನು ಆದಷ್ಟು ಬೇಗನೆ ನಿಯಂತ್ರಿಸಿ ಮೊದಲ ಇನಿಂಗ್ಸ್ ನಲ್ಲಿ ಮುನ್ನಡೆ ಪಡೆಯುವ ನಿರೀಕ್ಷೆಯಲ್ಲಿದೆ. ಮೀಸಲು ದಿನವೂ ಸೇರಿದಂತೆ ಈಗಲೂ  ಪಂದ್ಯಕ್ಕೆ ಸಮಯಾವಕಾಶವಿದೆ. 5ನೇ ದಿನದಾಟದ ಮೊದಲ ಸೆಶನ್ ಎಲ್ಲವನ್ನೂ ನಿರ್ಧರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News