ತೊಕ್ಕೊಟ್ಟು : ಕಳವು ಪ್ರಕರಣ ; ಆರೋಪಿ ಸೆರೆ
Update: 2021-06-22 16:34 IST
ಉಳ್ಳಾಲ : ತೊಕ್ಕೊಟ್ಟು ಸಮೀಪದ ಒಳಪೇಟೆ ರಿಕ್ಷಾ ಕ್ಲಿನಿಕ್ ಬಳಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಉಳ್ಳಾಲ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿ ಯನ್ನು ನಂದಾವರ ನಿವಾಸಿ ಉಬೇದುಲ್ಲ (27) ಎಂದು ಗುರುತಿಸಲಾಗಿದೆ.
ಈತ ಮಾ.19ರಂದು ಚಿನ್ನಾಭರಣ ಹಾಗೂ ಮೊಬೈಲ್ ಕಳವು ಮಾಡಿ ಪರಾರಿಯಾಗಿದ್ದ ಎಂದು ಜಯರಾಜ್ ಎಂಬವರು ದೂರು ನೀಡಿದ್ದರು. ಆರೋಪಿಯ ಬಗ್ಗೆ ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಆತನನ್ನು ಬಂಧಿಸಿ ಕಳವಾದ ಚಿನ್ನಾಭರಣ ಹಾಗೂ ಮೊಬೈಲ್ ವಶಪಡಿಸಿಕೊಂಡಿದ್ದಾರೆ.