ಶರದ್ ಪವಾರ್ ನೇತೃತ್ವದ ಸಭೆಯಲ್ಲಿ ತೃಣಮೂಲ, ಎಎಪಿ ಸಹಿತ 8 ರಾಜಕೀಯ ಪಕ್ಷಗಳು ಭಾಗಿ

Update: 2021-06-22 12:18 GMT

ಹೊಸದಿಲ್ಲಿ: ಹಿರಿಯ ರಾಜಕಾರಣಿ ಶರದ್ ಪವಾರ್ ಅವರ ಮನೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ, ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್, ಎಡ ಪಕ್ಷ ಹಾಗೂ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (ಎಎಪಿ) ಸೇರಿದಂತೆ ಎಂಟು ರಾಜಕೀಯ ಪಕ್ಷಗಳು ಭಾಗವಹಿಸಿದ್ದವು.

ಮಾಜಿ ಕೇಂದ್ರ ಮಂತ್ರಿ ಯಶ್ವಂತ್ ಸಿನ್ಹಾ ಅವರ ಸಂಘಟನೆ ರಾಷ್ಟ್ರ ಮಂಚ್ ಸಭೆಯನ್ನು  ಆಯೋಜಿಸಿದ್ದು, ಸಿನ್ಹಾ ಸಭೆಗೆ ಆಗಮಿಸಿದ ಮೊದಲಿಗರಾಗಿದ್ದರು. ಸಭೆಯ ಆತಿಥ್ಯ ವಹಿಸುವಂತೆ ಶರದ್ ಪವಾರ್ ಅವರನ್ನು ಸಿನ್ಹಾ ಕೇಳಿದ್ದರು,  "ಪ್ರಸ್ತುತ ಘಟನೆಗಳನ್ನು ಚರ್ಚಿಸಲು" ಈ ಸಭೆಯನ್ನು ಕರೆಯಲಾಗಿದೆ ಎನ್ನಲಾಗಿದೆ.

ಸಭೆಯಲ್ಲಿ ಎಂಟು ರಾಜಕೀಯ ಪಕ್ಷಗಳು ಹಾಜರಾಗಿದ್ದವು.  ನ್ಯಾಶನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲಾ, ಎನ್ ಸಿಪಿ ನಾಯಕರಾದ  ಮಜೀದ್ ಮೆಮನ್ ಹಾಗೂ  ವಂದನಾ ಚೌಹಾಣ್ , ಆರ್‌ಎಲ್‌ಡಿಯ ಜಯಂತ್ ಚೌಧರಿ, ಸಮಾಜವಾದಿ ಪಕ್ಷದ ಘನ ಶ್ಯಾಮ್ ತಿವಾರಿ ಹಾಗೂ  ಆಮ್ ಆದ್ಮಿ ಪಕ್ಷದ (ಎಎಪಿ) ಸುಶೀಲ್ ಗುಪ್ತಾ ಭಾಗವಹಿಸಿದ್ದರು.

ನಿವೃತ್ತ ನ್ಯಾಯಮೂರ್ತಿ ಎ.ಪಿ. ಶಾ, ಹಿರಿಯ ವಕೀಲ ಕೆಟಿಎಸ್ ತುಳಸಿ, ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಖುರೇಶಿ, ಮಾಜಿ ರಾಯಭಾರಿ ಕೆ.ಸಿ.ಸಿಂಗ್, ಗೀತರಚನೆಕಾರ ಜಾವೇದ್ ಅಖ್ತರ್ ಹಾಗೂ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್ ಅವರು ಸಭೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News