ದ.ಕ. ಜಿಲ್ಲೆಯಲ್ಲಿ ಮಂಗಳವಾರವೂ ಮಳೆ ಇಳಿಮುಖ

Update: 2021-06-22 13:10 GMT

ಮಂಗಳೂರು, ಜೂ.22: ದ.ಕ. ಜಿಲ್ಲೆಯಲ್ಲಿ ಮಂಗಳವಾರವೂ ಮಳೆ ಇಳಿಮುಖವಾಗಿದೆ. ಬೆಳಗ್ಗಿನಿಂದ ಸಂಜೆವರೆಗೆ ಆಗಾಗ ಸ್ವಲ್ಪ ಮಳೆ ಬಂದದ್ದು ಬಿಟ್ಟರೆ ಬಹುತೇಕ ಮೋಡ ಕವಿದ ವಾತಾವರಣವಿತ್ತು. ಕೆಲಕಾಲ ಬಿಸಿಲೂ ಮೂಡಿತ್ತು. ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಒಂದು ಮನೆ ಸಂಪೂರ್ಣ ಹಾನಿಗೆ ಒಳಗಾಗಿದ್ದರೆ, ಎರಡು ಮನೆಗಳು ಭಾಗಶಃ ಹಾನಿಗೀಡಾಗಿವೆ.

ಮಳೆ ಇಳಿಕೆಯಾಗಿದ್ದರೂ ಮಂಗಳೂರು ನಗರದ ಅಲ್ಲಲ್ಲಿ ನಿರ್ಮಾಣ ಹಂತದ ಕಟ್ಟಡಗಳಲ್ಲಿ ನೀರು ನಿಂತಿದ್ದು, ಮಲೇರಿಯ, ಡೆಂಗ್ಯೂ ಸೊಳ್ಳೆಗಳ ಹಾವಳಿಯ ಭೀತಿ ಹೆಚ್ಚಿದೆ.

ಮಳೆ ವಿವರ: ಸೋಮವಾರ ಬೆಳಗ್ಗಿನಿಂದ ಮಂಗಳವಾರ ಬೆಳಗ್ಗಿನವರೆಗೆ ಬೆಳ್ತಂಗಡಿಯಲ್ಲಿ 19.2 ಮಿ.ಮೀ., ಬಂಟ್ವಾಳದಲ್ಲಿ 5 ಮಿ.ಮೀ., ಮಂಗಳೂರಿನಲ್ಲಿ 15.4 ಮಿ.ಮೀ., ಪುತ್ತೂರಿನಲ್ಲಿ 7.1 ಮಿ.ಮೀ., ಸುಳ್ಯದಲ್ಲಿ 8 ಮಿ.ಮೀ., ಮೂಡುಬಿದಿರೆಯಲ್ಲಿ 14.4 ಮಿ.ಮೀ., ಕಡಬದಲ್ಲಿ 12.7 ಮಿ.ಮೀ. ಮಳೆ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News