ಮಂಗಳೂರಿನಲ್ಲಿ ಶತಕ ಬಾರಿಸಿದ ಪೆಟ್ರೋಲ್ ಬೆಲೆ

Update: 2021-06-22 15:41 GMT

ಮಂಗಳೂರು, ಜೂ. 22 : ದೇಶದ ವಿವಿಧೆಡೆಗಳ ಬಳಿಕ ಇದೀಗ ಮಂಗಳೂರಿನಲ್ಲೂ ಪೆಟ್ರೋಲ್ ಬೆಲೆ ಲೀಟರ್ ಗೆ ನೂರು ರೂಪಾಯಿ ಗಡಿ ದಾಟಿದೆ. ಲೀಟರ್ ಗೆ ರೂ.100.04 ಪಾವತಿಸಿ ಪೆಟ್ರೋಲ್ ತುಂಬಿಸಿಕೊಂಡ ಬಗ್ಗೆ ಗ್ರಾಹಕರು ವಾರ್ತಾಭಾರತಿಗೆ ಮಾಹಿತಿ ನೀಡಿದ್ದಾರೆ. 

ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಶತಕ ದಾಟಿದ ಬಳಿಕ ಕೆಲವು ದಿನಗಳ ಹಿಂದೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಲೀಟರ್ ಪೆಟ್ರೋಲ್ ಬೆಲೆ ನೂರು ರೂ. ದಾಟಿತ್ತು. ಮಂಗಳೂರಿನಲ್ಲಿ ಮಂಗಳವಾರ ರಾತ್ರಿ ವಾಹನಗಳಿಗೆ ಪೆಟ್ರೋಲ್ ತುಂಬಿಸಲು ಹೋದವರಿಗೆ ಲೀಟರ್ ಗೆ  ನೂರು ರೂಪಾಯಿ ಆಗಿರುವುದು ಗಮನಕ್ಕೆ ಬಂದಿದೆ.

ನಗರದಲ್ಲಿ ಪೆಟ್ರೋಲ್ ದರ ಮಂಗಳವಾರ ಒಂದು ಲೀಟರ್‌ ಗೆ ರೂ.100.02 ಹಾಗೂ ಕೆಲವು ಕಂಪೆನಿಗಳ ಬಂಕ್ ಗಳಲ್ಲಿ ಇನ್ನೂ ಹೆಚ್ಚಿನ ದರಕ್ಕೆ ಮಾರಾಟವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪೆಟ್ರೋಲ್ ಬಂಕ್ ಗಳಲ್ಲಿ ಶನಿವಾರವೇ ಪೆಟ್ರೋಲ್ ದರ 100 ರೂಪಾಯಿ ತಲುಪಿತ್ತು. ಇಂದು ನಗರದ ಬಹುತೇಕ ಎಲ್ಲಾ ಪೆಟ್ರೋಲ್ ಕಂಪೆನಿಗಳ ಬಂಕ್ ಗಳಲ್ಲಿ ಸೋಮವಾರ ಇದ್ದ ಲೀಟರ್ ಗೆ ರೂ. 99.73 ಪೆಟ್ರೋಲ್ ದರ 100ರ ಗಡಿ ದಾಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News