ಖಾಸಗಿ ಬಸ್‌ಗಳಿಗೆ 6 ತಿಂಗಳ ಸ್ತೆ ತೆರಿಗೆ ವಿನಾಯಿತಿ ನೀಡಿ: ಕುಯಿಲಾಡಿ ಸುರೇಶ್ ನಾಯಕ್

Update: 2021-06-22 17:35 GMT

ಉಡುಪಿ, ಜೂ.22: ಡೀಸೆಲ್ ದರ ಏರಿಕೆ ಹಾಗೂ ಕೇವಲ ಶೇ.50ರಷ್ಟು ಸೀಟು ಭರ್ತಿ ನೀತಿಯಿಂದ ಖಾಸಗಿ ಬಸ್ ಸಂಚಾರ ಕಷ್ಟಕರವಾಗಿದ್ದು ರಾಜ್ಯ ಸರಕಾರ ಖಾಸಗಿ ಬಸ್‌ಗಳಿಗೆ ಆರು ತಿಂಗಳ ರಸ್ತೆ ತೆರಿಗೆ ವಿನಾಯಿತಿ ನೀಡಬೇಕು ಎಂದು ರಾಜ್ಯ ಖಾಸಗಿ ಬಸ್ ಮಾಲಕರ ಒಕ್ಕೂಟದ ಖಜಾಂಚಿ ಕುಯಿಲಾಡಿ ಸುರೇಶ್ ನಾಯಕ್ ಆಗ್ರಹಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಬಸ್‌ಗಳು ವಿದ್ಯಾರ್ಥಿ ಪಾಸ್, ನಿತ್ಯ ಪ್ರಯಾಣಿಕರಿಗೆ ರಿಯಾಯಿತಿ ನೀಡುತ್ತಿದೆ. ಆದರೂ ಕೆಎಸ್‌ಆರ್‌ಟಿಸಿಗೆ ಸರಕಾರ 2,400ಕೋಟಿ ರೂ. ಅನುದಾನ ನೀಡಿದೆ. ಅದೇ ರೀತಿ ಖಾಸಗಿ ಸಾರಿಗೆ ಉದ್ಯಮದ ಚೇತರಿಕೆಗೆ ಸರಕಾರದ ಸಹಕಾರ ಬೇಕು. ಈ ವಿಚಾರದಲ್ಲಿ ಶೀಘ್ರವೇ ರಾಜ್ಯ ಸಾರಿಗೆ ಸಚಿವರನ್ನು ಭೇಟಿ ಮಾಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News