ವಿದ್ಯುತ್ ಬಿಲ್ ಮನ್ನಾ ಮಾಡಲು ಆಗ್ರಹಿಸಿ ಡಿವೈಎಫ್ಐ ಪ್ರತಿಭಟನೆ
ಕುಂದಾಪುರ, ಜೂ.22: ವಿದ್ಯುತ್ ದರ ಏರಿಕೆ ಹಿಂಪಡೆಯಲು ಹಾಗು ಲಾಕ್ ಡೌನ್ ಅವಧಿಯ ಮೂರು ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಲು ಆಗ್ರಹಿಸಿ ಡಿವೈಎಫ್ಐ ರಾಜ್ಯ ಸಮಿತಿ ಕರೆಯ ಮೇರೆಗೆ ಕುಂದಾಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಚಿಮಣಿ, ದೊಂದಿ, ಕ್ಯಾಂಡಲ್ ಪ್ರತಿಭಟನೆಯನ್ನು ಜೂ.21ರಂದು ರಾತ್ರಿ ಹಮ್ಮಿಕೊಳ್ಳಲಾಗಿತ್ತು.
ಕೊರೋನ ಹಾವಳಿಯಿಂದ ಜನತೆ ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿರುವ ಜನರಿಗೆ ರಾಜ್ಯ ಸರಕಾರ ವಿದ್ಯುತ್ ಬೆಲೆ ಏರಿಕೆ ಮಾಡಿ ದ್ರೋಹವೆಸಗಿದೆ. ವಿದ್ಯುತ್ ಬಳಕೆಯ ಯಾವುದೇ ಐಷಾರಾಮಿ ವಸ್ತುಗಳನ್ನು ಹೊಂದಿರದ ಸಾಮಾನ್ಯ ಕುಟುಂಬಗಳೂ ಇಂದು ತಿಂಗಳಿಗೆ ಸಾವಿರ ರೂ.ಗಳಿಗೂ ಅಧಿಕ ವಿದ್ಯುತ್ ಬಿಲ್ ಪಾವತಿಸಬೇಕಾದ ಪರಿಸ್ಥಿತಿಯಲ್ಲಿರುವಾಗ ಸರಕಾರ ಒಂದು ವರ್ಷದ ಅವಧಿಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಬೆಲೆ ಏರಿಕೆ ಮಾಡಿ ಜನದ್ರೋಹಿಯಾಗಿ ವರ್ತಿಸುತ್ತಿದೆ ಎಂದು ಪ್ರತಿಭಟನಕಾರರು ದೂರಿದರು.
ತಾಲೂಕಿನ ಹದಿನೇಳು ಗ್ರಾಮಗಳಲ್ಲಿ ಯುವಜನರು, ಕಾರ್ಮಿಕರು, ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಡಿವೈಎಫ್ಐ ತಾಲೂಕು ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ತಾಲೂಕು ಉಪಾಧ್ಯಕ್ಷ ಸುರೇಶ್ ಕಲ್ಲಾಗರ ಮಾತನಾಡಿದರು. ತಾಲೂಕು ಅಧ್ಯಕ್ಷ ರಾಜೇಶ್ ವಡೇರಹೋಬಳಿ, ಕಾರ್ಯದರ್ಶಿ ಗಣೇಶದಾಸ್, ರಾಜ ಬಿಟಿಆರ್, ಗಣೇಶ್ ಕಲ್ಲಾಗರ ಉಪಸ್ಥಿತರಿದ್ದರು.
ಬಿ.ಸಿ.ರಸ್ತೆ ಘಟಕದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಧ್ಯಕ್ಷ ಮಂಜುನಾಥ ಶೋಗನ್, ಕಾರ್ಯದರ್ಶಿ ರವಿ ವಿಎಂ, ಹೆಮ್ಮಾಡಿಯಲ್ಲಿ ಸಂತೋಷ ಹೆಮ್ಮಾಡಿ, ನರಸಿಂಹ ದೇವಾಡಿಗ, ಜಗದೀಶ್ ಆಚಾರ್, ಪಡುಕೋಣೆ ಘಟಕದಲ್ಲಿ ನಾಗರಾಜ, ಕಿರಣ್, ಗುಲ್ವಾಡಿ, ಅಬ್ಬಿಗುಡ್ಡೆ, ಮಾವಿನಕಟ್ಟೆಯಲ್ಲಿ ಜಮಾಲ್, ಅಣ್ಣಪ್ಪಅಬ್ಬಿಗುಡ್ಡೆ, ಅಬ್ಬಾಸ್, ಬಸ್ರೂರಿನಲ್ಲಿ ಕಾರ್ಮಿಕ ಸಂಘದ ಮುಖಂಡರಾದ ಶಶಿಕಾಂತ್, ಸುರೇಶ್ ಪೂಜಾರಿ, ಅಂಪಾರು ನೆಲ್ಲಿಕಟ್ಟೆಯಲ್ಲಿ ಚಂದ್ರಕುಲಾಲ್, ಚಂದ್ರಪೂಜಾರಿ, ಹಾಲಾಡಿಯಲ್ಲಿ ಕಾರ್ಮಿಕ ಸಂಘದ ಅನಂತ ಕುಲಾಲ್ ವಕ್ವಾಡಿ, ಗಂಗೊಳ್ಳಯಲ್ಲಿ ಡಿವೈಎಪ್ಐ ತಾಲೂಕು ಉಪಾಧ್ಯಕ್ಷ ಅರುಣ್ ಕುಮಾರ್, ಕಾರ್ಮಿಕ ಮುಖಂಡ ಚಿಕ್ಕ ಮೊಗವೀರ, ಆಲೂರಿನಲ್ಲಿ ರಘುರಾಮ್ ಆಚಾರ್, ಗಣೇಶ್, ವಂಡ್ಸೆಯಲ್ಲಿ ಶಂಕರ ಆಚಾರ್ಯ, ಗುಜ್ಜಾಡಿ ಯಲ್ಲಿ ಶ್ರೀನಿವಾಸ ಪೂಜಾರಿ, ಸಂತೋಷ, ಕೋಟೇಶ್ವರದಲ್ಲಿ ಕಾರ್ಮಿಕ ಸಂಘದ ಅಧ್ಯಕ್ಷರಾದ ಪರಮೇಶ್ವರ್, ಬೈಂದೂರು ಬಿಜೂರಿನಲ್ಲಿ ಕಾರ್ಮಿಕ ಮುಖಂಡ ರೊನಾಲ್ಡ್ ರಾಜೇಶ್ ಕ್ವಾಡ್ರಸ್ ಹಾಜರಿದ್ದರು.