ಫ್ರಾನ್ಸ್: ಸರ್ಕೋಝಿ ವಿಚಾರಣೆ ಅಂತ್ಯ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ

Update: 2021-06-22 18:45 GMT

ಪ್ಯಾರಿಸ್, ಜೂ.22: 2012ರ ಚುನಾವಣೆಯ ಪ್ರಚಾರದ ಸಂದರ್ಭ ನಿಯಮ ಮೀರಿ ಹಣ ವೆಚ್ಚ ಮಾಡಿರುವ ಆರೋಪ ಎದುರಿಸುತ್ತಿರುವ ಫ್ರಾನ್ಸ್ ಮಾಜಿ ಅಧ್ಯಕ್ಷ ನಿಕೋಲಾಸ್ ಸರ್ಕೋಝಿ ವಿರುದ್ದದ ವಿಚಾರಣೆ ಪ್ಯಾರಿಸ್ನಲ್ಲಿ ಮಂಗಳವಾರ ಅಂತ್ಯಗೊಂಡಿದ್ದು , ಮುಂದಿನ ದಿನಗಳಲ್ಲಿ ತೀರ್ಪು ಹೊರಬೀಳಲಿದೆ ಎಂದು ಮೂಲಗಳು ಹೇಳಿವೆ. 

ಸರ್ಕೋಝಿಗೆ 6 ತಿಂಗಳ ಜೈಲುಶಿಕ್ಷೆ, 6 ತಿಂಗಳ ಅಮಾನತು ಶಿಕ್ಷೆ(6 ತಿಂಗಳ ಅವಧಿಯಲ್ಲಿ ಮತ್ತೆ ಅಪರಾಧ ಎಸಗಿದರೆ ಹೆಚ್ಚುವರಿ ಶಿಕ್ಷೆ) ಮತ್ತು 4,468 ಡಾಲರ್ ದಂಡ ವಿಧಿಸಬೇಕೆಂದು ಅರ್ಜಿದಾರರು ಆಗ್ರಹಿಸಿದ್ದರು. ಚುನಾವಣಾ ಪ್ರಚಾರಕ್ಕೆ ಅನುಮತಿಸಲಾದ 27.5 ಮಿಲಿಯನ್ ಡಾಲರ್ ಮೊತ್ತಕ್ಕಿಂತ ದುಪ್ಪಟ್ಟು ಹಣ ಖರ್ಚು ಮಾಡಿದ ಆರೋಪ ಸರ್ಖೋಝಿ ವಿರುದ್ಧವಿದೆ. ಆದರೆ ಅವರು ಆರೋಪವನ್ನು ನಿರಾಕರಿಸಿದ್ದಾರೆ. 

ಮಾರ್ಚ್ 1ರಂದು ವಿಚಾರಣೆ ಮುಕ್ತಾಯವಾದ ಮತ್ತೊಂದು ಪ್ರಕರಣದಲ್ಲಿ 66 ವರ್ಷದ ಸರ್ಕೋಝಿ ಅಪರಾಧಿ ಎಂದು ತೀರ್ಮಾನವಾಗಿದೆ. ಮರು ಆಯ್ಕೆ ಬಯಸುವ ಅಧ್ಯಕ್ಷರು ಚುನಾವಣೆಗೆ ಖರ್ಚು ಮಾಡಲು ವೆಚ್ಚವನ್ನು ನಿಗದಿಗೊಳಿಸಿದ್ದು, ಈ ನಿಗದಿ ಮೀರಿ ಖರ್ಚು ಮಾಡಿರುವ ಬಗ್ಗೆ ಲೆಕ್ಕಪತ್ರ ಅಧಿಕಾರಿ 2 ಬಾರಿ ಸೂಚನೆ ನೀಡಿದ್ದರೂ ಸರ್ಕೋಝಿ ಧಿಕ್ಕರಿಸಿದ್ದರು ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News