ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ :ಭೋಜನ ವಿರಾಮಕ್ಕೆ ಭಾರತ 130/5

Update: 2021-06-23 12:01 GMT
photo: twitter

ಸೌತಾಂಪ್ಟನ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನ ಆರನೇ ದಿನವಾದ ಬುಧವಾರ ಭೋಜನ ವಿರಾಮದ ವೇಳೆಗೆ  ಭಾರತ ತಂಡ ಎರಡನೇ ಇನಿಂಗ್ಸ್ ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 5 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿದೆ.

2 ವಿಕೆಟ್ ನಷ್ಟಕ್ಕೆ 64 ರನ್  ನಿಂದ ಬ್ಯಾಟಿಂಗ್ ಮುಂದುವರಿಸಿದ  ಭಾರತ ತಂಡ ಜಮೀಸನ್ (2-21) ಹಾಗೂ ಟಿಮ್ ಸೌಥಿ(2-35) ಅವರ ನಿಖರ ಬೌಲಿಂಗ್ ದಾಳಿಗೆ ತತ್ತರಿಸಿ 109 ರನ್ ಗೆ 5 ವಿಕೆಟ್ ಗಳನ್ನು ಕಳೆದುಕೊಂಡಿದೆ.

ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಭ್ ಪಂತ್ (28) ಹಾಗೂ ರವೀಂದ್ರ ಜಡೇಜ(12) 6ನೇ ವಿಕೆಟ್ ಗೆ 21 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದ್ದಾರೆ. ಭಾರತವು ಲಂಚ್ ವಿರಾಮದ ವೇಳೆಗೆ 55 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿದೆ.  

ಇಂದು ಬ್ಯಾಟಿಂಗ್ ಮುಂದುವರಿಸಿದ ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ  ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಕೊಹ್ಲಿ 13 ರನ್ ಗಳಿಸಿ ಔಟಾದರೆ, ಪೂಜಾರ 15 ರನ್ ಗೆ ವಿಕೆಟ್ ಒಪ್ಪಿಸಿದರು.

ಇನ್ನೂ 5 ವಿಕೆಟ್ ಹೊಂದಿರುವ ಭಾರತವು ಒಟ್ಟಾರೆ 98 ರನ್ ಮುನ್ನಡೆಯಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News