ಟ್ಯಾಕ್ಸಿಗಳ ಪ್ರಯಾಣ ದರ ಪರಿಷ್ಕರಣೆ
ಉಡುಪಿ, ಜೂ.23: ರಾಜ್ಯ ಸರಕಾರದ ಅಧಿಸೂಚನೆಯಂತೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಮೇ 20ರಿಂದ ಜಾರಿಗೆ ಬರುವಂತೆ ಜಿಲ್ಲೆಯಲ್ಲಿ ಅಗ್ರಿಗೇಟರ್ಸ್ ನಿಯಮದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಮಾದರಿಯ ಟ್ಯಾಕ್ಸಿಗಳಿಗೆ ಪ್ರಯಾಣ ದರ ಪರಿಷ್ಕರಣೆ ಮಾಡಿದೆ.
ಸಾರ್ವಜನಿಕ ಪ್ರಯಾಣಿಕರ ಹಿತದೃಷ್ಟಿ, ಸ್ಥಳೀಯ ಜನಸಂಖ್ಯೆಗನುಗುಣವಾಗಿ ಮತ್ತು ಟ್ಯಾಕ್ಸಿ ಮಾಲಕ/ಚಾಲಕರ ಜೀವನ ನಿರ್ವಹಣಾ ವೆಚ್ಚ, ಇಂಧನ ಬೆಲೆಗಳ ಹೆಚ್ಚಳ ಹಾಗೂ ವಾಹನಗಳ ಬೆಲೆ ಮತ್ತು ನಿರ್ವಹಣಾ ವೆಚ್ಚ ಹೆಚ್ಚಾಗಿರುವುದನ್ನು ಗಮನದಲ್ಲಿರಿಸಿಕೊಂಡು ಈ ಕೆಳಗಿನಂತೆ ದರ ನಿಗದಿಪಡಿಸಿ ಆದೇಶ ಹೊರಡಿ ಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿಗಳ ಪ್ರಕಟಣೆ ತಿಳಿಸಿದೆ.
5 ಲಕ್ಷದವರೆಗಿನ ಮೌಲ್ಯದ ಡಿ ವರ್ಗದ ಟ್ಯಾಕ್ಸಿಗಳಿಗೆ ನಿಗದಿತ ದರ ಕನಿಷ್ಟ 4 ಕಿ.ಮಿ.ವರೆಗೆ 75 ರೂ, ಹೆಚ್ಚುವರಿ ಪ್ರತಿ ಕಿ.ಮೀಗೆ 25 ರೂ ಆಗಿರುತ್ತದೆ. 5ರಿಂದ 10 ಲಕ್ಷದವರೆಗಿನ ವೌಲ್ಯದ ಸಿ ವರ್ಗದ ಟ್ಯಾಕ್ಸಿಗಳಿಗೆ ನಿಗದಿತ ದರ ಕನಿಷ್ಟ 4 ಕಿ.ಮೀ.ವರೆಗೆ 100 ರೂ. ಆಗಿದ್ದು, ಹೆಚ್ಚುವರಿ ಪ್ರತಿ ಕಿ.ಮೀಗೆ 28 ರೂ. ಆಗಿರುತ್ತದೆ. 10ಲಕ್ಷದಿಂದ 16 ಲಕ್ಷದವರೆಗಿನ ವೌಲ್ಯದ ಬಿ ವರ್ಗದ ಟ್ಯಾಕ್ಸಿಗಳಿಗೆ ನಿಗದಿತ ದರ ಕನಿಷ್ಟ 4 ಕಿ.ಮೀ.ವರೆಗೆ 120 ರೂ. ಆಗಿದ್ದು, ಹೆಚ್ಚುವರಿ ಪ್ರತಿ ಕಿ.ಮೀಗೆ 31 ರೂ ಆಗಿರುತ್ತದೆ. 16 ಲಕ್ಷ ಮೇಲ್ಪಟ್ಟ ವೌಲ್ಯದ ಎ ವರ್ಗದ ಟ್ಯಾಕ್ಸಿಗಳಿಗೆ ನಿಗದಿತ ದರ ಕನಿಷ್ಟ 4 ಕಿ.ಮೀವರೆಗೆ 150 ರೂ. ಆಗಿದ್ದು, ಹೆಚ್ಚುವರಿ ಪ್ರತಿ ಕಿ.ಮೀಗೆ 35 ರೂ ಆಗಿರುತ್ತದೆ ಎಂದು ಆರ್‌ಟಿಎ ಕಾರ್ಯದರ್ಶಿಗಳ ಪ್ರಕಟಣೆ ತಿಳಿಸಿದೆ.